ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಗಳ ವಿರುದ್ಧ ಇತ್ತೀಚಿಗೆ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ದರ್ಶನ್ ಅವರ ಕೊಲೆ ಪ್ರಕರಣದ ಕುರಿತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ನನಗೆ ತೊಂದರೆ ಬಂದಾಗ ಮತ್ತೊಬ್ಬರ ಹೆಗಲ ಮೇಲೆ ಗನ್ ಇಡುವ ಬದಲು,ನೇರವಾಗಿ ಮಾತಾಡಿ ಫೇಸ್ ಮಾಡಿದ್ದೇನೆ ಎಂದು ತಿಳಿಸಿದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಮಂಡ್ಯದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಟ ದರ್ಶನ್ ಅವರು ಪರೋಕ್ಷವಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಹಲವು ಪದಗಳನ್ನು ಬಳಕೆ ಮಾಡಿದ್ದರು. ನಿರ್ಮಾಪಕ ಉಮಾಪತಿ ಗೌಡ ಕೂಡ ದರ್ಶನ ವಿರುದ್ಧ ಆಕ್ರೋಶ ಹೊರ ಹಾಕಿದ್ದರು ಆದರೆ ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಜೈಲು ಪಾಲಾಗಿರುವ ವಿಚಾರವಾಗಿ ಮಾತನಾಡಿ,ಮಾನವೀಯತೆ ದೃಷ್ಟಿಯಿಂದ ನೋಡುವುದಾದರೆ ಖಂಡಿತ ನಡೆದಿರುವ ಘಟನೆ ದೊಡ್ಡ ತಪ್ಪು ಎಂದಿದ್ದಾರೆ.
ಒಬ್ಬ ವ್ಯಕ್ತಿ ಮೇಲೆ ನಾನು ಆರೋಪ ಮಾಡುತ್ತಿಲ್ಲ ಆದರೆ ಸಮಯ ಸಂದರ್ಭ ಏನು ಮಾಡಿಸಿತ್ತು ಅದು ನಮಗೆ ಗೊತ್ತಿಲ್ಲ. ಘಟನೆ ನಡೆದ ಜಾಗದಲ್ಲಿ ಪೊಲೀಸ್ ಇಲಾಖೆಯವರು ವಿಚಾರಣೆ ಮಾಡಿದ್ದಾರೆ ಅದರಿಂದ ಸುಮಾರು ನಾಲ್ಕು ವಾರ ಪುಟಗಳ ಚಾರ್ಚ್ ಶೀಟ್ ಸಲ್ಲಿಕೆ ಅಗಿದೆ. ಏನಾಗಿದೆ ಅನ್ನೋ ಸತ್ಯ ಸತ್ಯತೆಗಳು ನಮ್ಮ ಖಾನೂನಿನ ದೃಷ್ಟಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆಗಲಿ ಎಂದರು.
ನನಗೆ ತೊಂದರೆ ಬಂದಾಗಲೂ ಮತ್ತೊಬ್ಬರ ಹೆಗಲ ಮೇಲೆ ಗನ್ ಇಡುವ ಬದಲು ನೇರವಾಗಿ ಮಾತನಾಡಿ ಫೇಸ್ ಮಾಡಿದ್ದೀನಿ. ಸಮಸ್ಯೆ ಬಂದಾಗ ಎದೆ ತೋರಿಸಿ ಎದುರಿಸುತ್ತೀನಿ ಹೊರತು ಬೆನ್ನು ತೋರಿಸಿ ಓಡಿ ಹೋಗಲ್ಲ. ನಮ್ಮಲ್ಲಿ ಒಂದು ಅರ್ಥ ಮಾಡಿಕೊಳ್ಳಬೇಕು ಆರ್ಟಿಸ್ಟ್ಗಳು, ರಾಜಕರಾಣಿಗಳು ಅಥವಾ ಉನ್ನತಸ್ಥಾನದಲ್ಲಿ ಇರುವವರು ಅವರಿಗೆ ಆದಂತ ನೋವುಗಳು ಇರುತ್ತದೆ ಆ ನೋವುಗಳನ್ನು ವ್ಯಕ್ತ ಪಡಿಸಿಕೊಳ್ಳಲು ನೀತಿ ರೀತಿಗಳು ಇರುತ್ತದೆ ಎಎಂದು ಹೇಳಿದರು.