ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ಈಗಾಗಲೇ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದೀಗ ಚಾರ್ಜ್ ಶೀಟ್ ನಲ್ಲಿ ರೇಣುಕಸ್ವಾಮಿಯ ಕೊಲೆ ಯಾವ ರೀತಿ ಆಗಿದೆ ಎಂಬುದರ ಕುರಿತು ಸಂಪೂರ್ಣವಾದ ವಿವರ ಇಲ್ಲಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ವಿವರ ಕುರಿತಂತೆ ಜೂನ್ 9ರಂದು ಅಪರಿಚಿತ ದೇಹ ಪತ್ತೆಯಾಗಿರುವ ಕುರಿತು ದೂರು ದಾಖಲಾಗುತ್ತದೆ. ಜೂನ್ 10ರಂದು ಪೊಲೀಸರ ಮುಂದೆ ನಾಲ್ವರು ಶರಣಾಗಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರ ಮುಂದೆ ನಾಲ್ವರು ಆರೋಪಿಗಳು ಶರಣಾಗಿದ್ದರು. ರಾಘವೇಂದ್ರ ಕಾರ್ತಿಕ್ ಕೇಶವಮೂರ್ತಿ ನಿಖಿಲ್ ನಾಯಕ್ ಪೊಲೀಸರಿಗೆ ಶರಣಾಗಿದ್ದರು.
ಹಣಕಾಸಿನ ವಿಷಯಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಮೃತನ ಹೆಸರು ಬಳಸಿದ ಆಯುಧ, ವಾಹನಗಳ ಹೆಸರಿನಲ್ಲಿ ಗೊಂದಲದ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪ್ರತ್ಯೇಕ ವಿಚಾರಣೆಯಲ್ಲಿ ಒಂದೊಂದು ರೀತಿಯ ಹೇಳಿಕೆ ನೀಡಿದ್ದರು. ಗೊಂದಲಕಾರಿ ವ್ಯತಿರಿಕ್ತ ಹೇಳಿಕೆ ನೀಡಿದಕ್ಕೆ ಷಡ್ಯಂತರ ಬಯಲಾಗಿದೆ. ಮುಖಾಮುಖಿ ಕೂಡಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಸುಮಾರು 2 ವರ್ಷಗಳಿಂದ ನಟ ದರ್ಶನ್ ಹಾಗೂ ಪವಿತ್ರ ಗೌಡ ಒಡನಾಟದಲ್ಲಿದ್ದರು.ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಪವಿತ್ರ ಗೌಡ ನಟ ದರ್ಶನ್. A1 ಆರೋಪಿ ಪವಿತ್ರ ಗೌಡ ಬಳಿ ನಾಲ್ಕು ಇನ್ಸ್ಟಾಗ್ರಾಮ್ ಖಾತೆ ಇದೆ. 2024 ಫೆಬ್ರವರಿ ತಿಂಗಳನಿಂದ ರೇಣುಕಾ ಸ್ವಾಮಿ ಮೆಸೇಜ್ ಮಾಡುತ್ತಿದ್ದ. ಗೌತಮ್ ಕೆ ಎಸ್ 1990 ಇನ್ಸ್ಟಾಗ್ರಾಮ್ ಖಾತೆಯಿಂದ ಅಶ್ಲೀಲ ಸಂದೇಶ ರವಾನಿಸಿದ್ದ.
ವಿಡಿಯೋ ಫೋಟೋ ಸಂದೇಶವನ್ನು ರೇಣುಕಾ ಸ್ವಾಮಿ ಪವಿತ್ರ ಗೌಡಗೆ ರವಾನಿಸಿದ್ದ. ಜೂನ್ 3 ರಂದು ಡ್ರಾಪ್ ಮಿ ಯುವರ್ ನಂಬರ್ ಎಂದು ಪವಿತ್ರ ಗೌಡ ಸಂದೇಶ ರವಾನಿಸಿದ್ದಾಳೆ. ನಿನ್ನ ನಂಬರ್ ಕೊಡು ಎಂದು ಪವಿತ್ರಾಗೆ ರೇಣುಕಾ ಸ್ವಾಮಿ ಕೇಳಿದ್ದ. A3 ಆರೋಪಿ ಪವನ್ ನಂಬರ್ ತನ್ನದೆಂದು ರೇಣುಕಾ ಸ್ವಾಮಿಗೆ ಪವಿತ್ರ ಗೌಡ ಕಳುಹಿಸಿದ್ದಾಳೆ. ಜೂನ್ 5 ರಂದು ಫೋನ್ ನಲ್ಲಿ ನಂಬಿಕೆ ಬರುವಂತೆ ಪವಿತ್ರ ಗೌಡ ಮಾತನಾಡಿದ್ದಾಳೆ. ವಾಟ್ಸಪ್ ಮೆಸೇಜ್ ಕಳುಹಿಸಲು ಪವಿತ್ರ ಗೌಡ ರೇಣುಕಾ ಸ್ವಾಮಿಗೆ ಪ್ರೇರೇಪಿಸಿದ್ದಾಳೆ.
ಪವಿತ್ರ ಗೌಡ ರೀತಿಯಲ್ಲಿ ರೇಣುಕಾ ಸ್ವಾಮಿಗೆ ಚಾಟ್ ಮಾಡಿ ಆತನ ವಿಳಾಸ ಸಂಗ್ರಹಿಸಿದ್ದಾರೆ. ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ರೇಣುಕಾ ಸ್ವಾಮಿ ಮಾಹಿತಿ ನೀಡಿದ್ದಾನೆ. ಈ ವೇಳೆ ಕಿಡ್ನ್ಯಾಪ್ ಮಾಡಿ ಒಂದು ಗತಿ ಕಾಣಿಸಲು ಪವಿತ್ರ ಪವನ್ ಗೆ ಹೇಳಿದ್ದಾಳೆ. ಜೂನ್ 6ರಂದು A10 ಆರೋಪಿ ವಿನಯ್ ಗೆ ಕರೆ ಮಾಡಿ ಪವನ್ ಮಾಹಿತಿ ನೀಡಿದ್ದಾನೆ.
A5 ನಂದೀಶ್ ಸಾಕ್ಷಿ ಮೂಲಕ ಪತ್ತೆಗೆ ಸೂಚಿಸುವುದಾಗಿ ಹೇಳುತ್ತಾನೆ. ಜೂನ್ 7ರಂದು ತನ್ನ ಮಾಹಿತಿ ನೀಡಿದ್ದಾನೆ. ರೇಣುಕಾ ಸ್ವಾಮಿ ಚಿತ್ರದುರ್ಗದ ಕೋರ್ಟ್ ಬಳಿ ಇರುವುದಾಗಿ ಹೇಳಿರುತ್ತಾನೆ. A4 ರಾಘವೇಂದ್ರ A6 ಜಗದೀಶ್ ಹಾಗೂ A7 ಮನು ಜೊತೆ ಹುಡುಕಾಟ ನಡೆಸಿದ್ದಾರೆ. ಜೂನ್ 8ರಂದು ಮನೆ ಬಳಿಯೇ ಆಟೋದಲ್ಲಿ A4, A6 A7 ಆರೋಪಿಗಳು ತೆರಳಿದ್ದಾರೆ. ಈ ವೇಳೆ ತಂಗಿಯ ಸ್ಕೂಟರ್ ನಲ್ಲಿ ರೇಣುಕಾ ಸ್ವಾಮಿ ಹೊರಟಿದ್ದಾನೆ. ಇವರು ಆತನನ್ನು ಫಾಲೋ ಮಾಡುತ್ತಾರೆ.
A4 ರಾಘವೇಂದ್ರ ರೇಣುಕಾಸ್ವಾಮಿ ಫೋಟೋವನ್ನು ವಿನಯ್ ಗೆ ಕಳುಹಿಸುತ್ತಾನೆ. ಜೆಸಿ ಸರ್ಕಲ್ ಬಳಿಯ ಬಾಲಾಜಿ ಬಾರ್ ಬಳಿ ಸುಮಾರು 10 ಗಂಟೆಗೆ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡುತ್ತಾರೆ. ಇಟಿಯೋಸ್ ಕಾರಿಗೆ ನಂತರ ಆತನನ್ನು ಶಿಫ್ಟ್ ಮಾಡುತ್ತಾರೆ. ಮಧ್ಯದ ಸೀಟಿನಲ್ಲಿ ಕೂಡಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಾರೆ A8 ರವಿಶಂಕರ್ ಚಾಲನೆ ಮಾಡುತಿದ್ದ ಕಾರು ಮಾರ್ಗ ಮಧ್ಯ ನಿಲ್ಲುತ್ತದೆ. ತುಮಕೂರಿನ ರೇಣುಕಾ ಸ್ವಾಮಿ ಹಣದಲ್ಲಿ ದುರ್ಗಾ ಬಾರ್ ನಲ್ಲಿ ಮಧ್ಯ ಖರೀದಿಸುತ್ತಾರೆ.
ಬೆಂಗಳೂರಿಗೆ ಕರೆತಂದ ಬಳಿಕ ಪವನ್ ಗೆ ಕರೆ ಮಾಡಿ ರಾಘವೇಂದ್ರ ಮಾಹಿತಿ ನೀಡುತ್ತಾನೆ. ಶಡ್ ಲೊಕೇಶನ್ ಕಳುಹಿಸಿ ಅಲ್ಲಿಗೆ ಬರುವಂತೆ ಪವನ್ ರಾಘವೇಂದ್ರಗೆ ಸೂಚಿಸಿದ್ದಾನೆ. A8 ಅದನ್ನು A2 ದರ್ಶನ & ನಾಗರಾಜುಗೆ ತಿಳಿಸಿದ್ದನೆ. A11 ಅದನ್ನು ಪ್ರದೋಷ ಗೆ ತಿಳಿಸಿದ್ದಾನೆ. ಅಲ್ಲಿ ಹಲ್ಲೆ ಕೊಲೆ ಬಗ್ಗೆ ಒಳಸಂಚು ನಡೆಸಿದ್ದಾರೆ. ವಿನಯ್ ಶೆಡ್ ನಲ್ಲಿದ್ದ ಸಾಕ್ಷಿಗೆ ಕರೆ ಮಾಡಿ ಕಾರು ಒಳಗಡೆ ಬಿಡುವಂತೆ ಸೂಚಿಸಿದ್ದಾನೆ. ಮಧ್ಯಾಹ್ನ 1:30 ಕ್ಕೆ ರೇಣುಕಾ ಸ್ವಾಮಿ ಇದ್ದ ಕಾರು ಶೆಡ್ಡಿಗೆ ಎಂಟ್ರಿ ಆಗುತ್ತದೆ. A3 A9 ಕೂಡ ಶೆಡ್ ಗೆ ಬಂದು ಸಾಕ್ಷಿಗೆ ಮರದ ಲಾಠಿಗೆ ತರಲು ಹೇಳುತ್ತಾರೆ.
ಈ ವೇಳೆ ಕೈನಿಂದ ಹಲ್ಲೆ ಮಾಡಿ ತಳ್ಳಿ, ಹಿಡಿದೆತ್ತಿ ನಂದೀಶ್ ರೇಣುಕಾ ಸ್ವಾಮಿಯನ್ನು ನೆಲಕ್ಕೆ ಕುಕ್ಕುತ್ತಾನೆ. ನಂತರ ಧನರಾಜ್ ಕಪಾಳಕ್ಕೆ ಹೊಡೆದು ಎದೆ, ಕೈ, ಕಾಲಿಗೆ ಎಲೆಕ್ಟ್ರಿಕ್ ಶಾಕ್ ನೀಡುತ್ತಾರೆ. ಈ ವೇಳೆ ಸ್ಟೋನಿ ಬ್ರೂಕ್ನಲ್ಲಿದ್ದ A2 ದರ್ಶನ, A11ನಾಗರಾಜ್ ಈ 14 ಪ್ರದೋಷ್ ಸಾಕ್ಷಿಗಳಾದ ಯಶಸ್ ಸೂರ್ಯ, ಚಿಕ್ಕಣ್ಣ ಜೊತೆ ಊಟ ಮಾಡುತ್ತಿದ್ದರು. ಹೆಡ್ನಲ್ಲಿದ್ದ ಸಾಕ್ಷಿ ಹಳ್ಳಿಯ ವಿವರವನ್ನು ವಿನಯ್ಗೆ ಕಳುಹಿಸಿದ್ದಾನೆ. ಲಾಠಿ ಪಕ್ಕದಲಿದ್ದ ಬಿದ್ದಿದ್ದ ರೇಣುಕಾ ಸ್ವಾಮಿ ಫೋಟೋವನ್ನು ವಾಟ್ಸಪ್ ಮಾಡಿದರು. ರೇಣುಕಾ ಸ್ವಾಮಿ ಅಳುತ್ತಿರುವ ಫೋಟೋ ಕೂಡ ವಿನಯ್ ಗೆ ಕಳುಹಿಸಲಾಗಿತ್ತು.
ಇದಾದ ಬಳಿಕ A3 ಪವನ್ A10 ವಿನಯ್ ಗೆ ಫೋನ್ ಮಾಡಿ ದರ್ಶನ್ ಇದ್ದಾರಾ ಎಂದು ಕೇಳಿದ್ದಾನೆ. ಪವನ್ ರೇಣುಕಾಸ್ ಸ್ವಾಮಿಗೆ ಹಲ್ಲೆ ನಡೆಸಿರುವ ಬಗ್ಗೆ ದರ್ಶನ್ ಗೆ ಮಾಹಿತಿ ನೀಡಿದ್ದಾನೆ . ಈ ವೇಳೆ ದರ್ಶನ್ ಪವಿತ್ರ ಗೌಡಗೆ ವಿಡಿಯೋ ಕಾಲ್ ಮಾಡಿದ್ದ ಎನ್ನಲಾಗಿದೆ. ಅದಾದ ಬಳಿಕ ದರ್ಶನ್ ಜೊತೆ ಪವಿತ್ರ ಗೌಡ ಆರ್ ಆರ್ ನಗರದಲ್ಲಿರುವ ಪಟ್ಟಣಗರೆ ಶೆಡ್ ಗೆ ಹೋಗಿದ್ದಾರೆ. ಅಲ್ಲಿ ರೇಣುಕಾ ಸ್ವಾಮಿಯ ಮೇಲೆ ಇಬ್ಬರೂ ಹಲ್ಲೆ ನಡೆಸಿದ್ದಾರೆ. ನಂತರ ದರ್ಶನ್ ಪವಿತ್ರ ಗೌಡ ಅಲ್ಲಿಂದ ತೆರಳಿದ್ದು, ಇತರೆ ಆರೋಪಿಗಳು ರೇಣುಕಾ ಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಅದಾದ ಬಳಿಕ ನಡೆದಿರುವ ಘಟನೆ ಕುರಿತಂತೆ ಎಲ್ಲರಿಗೂ ಗೊತ್ತೇ ಇದೆ. ಘಟನೆ ಬಳಿಕ ನಟ ದರ್ಶನ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ, ಪೊಲೀಸರು ಜಿಮ್ ಸೆಂಟರ್ ನಿಂದಲೇ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದು, ಅದಾದ ಬಳಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದು, ಅಲ್ಲದೆ ಇತ್ತೀಚಿಗೆ ಜೈಲಿನಲ್ಲಿ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಇತರರೊಂದಿಗೆ ಕೈಯಲ್ಲಿ ಸಿಗರೇಟ್ ಸೇದುತ್ತಾ ಕುಳಿತಿದ್ದ ಫೋಟೋ ವೈರಲ್ ಆಗಿತ್ತು.
ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಭಾರಿ ಸದ್ದು ಮಾಡಿತ್ತು.ಅದಾದ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ದರ್ಶನ್ ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಯಿತು.ಇದೀಗ ನಟ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಬೆನ್ನು ನೋವಿನಿಂದ ನರಳುತ್ತಿದ್ದ ಅವರಿಗೆ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಇನ್ನು ನಿನ್ನೆ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಸುಮಾರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇನ್ನು ದರ್ಶನ್ ಮುಂದಿನ ಭವಿಷ್ಯ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.