ಹುಬ್ಬಳ್ಳಿ : ಕಳೆದ ಜುಲೈ 15 ರಂದು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಸಹಜವಾಗಿ ಹುಬ್ಬಳ್ಳಿಯ ಜನತೆ ಈ ಒಂದು ಕಳ್ಳತನದಿಂದ ಭಯ ಭೀತರಾಗಿದ್ದರು.ಇದೀಗ ಕೇಶ್ವಾಪುರ ಪೊಲೀಸರು ಕಳ್ಳತನ ನಡೆದ ದಿನದಿಂದ 45 ದಿನಗಳ ಒಳಗೆ ಪ್ರಕರಣ ಭೇದಿಸಿದ್ದಾರೆ.
ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ಜುಲೈ 15 ರಂದು ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ಆಗಿತ್ತು. ಇದರಿಂದ ಹುಬ್ಬಳ್ಳಿ ಮಂದಿ ಕಂಗಾಲಾಗಿದ್ದರು. ಇದೀಗ ಪೊಲೀಸರು ಕಳ್ಳತನ ಮಾಡಿ 45 ದಿನಗಳೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಖದೀಮರಿಂದ ಬರೋಬ್ಬರಿ 77 ಲಕ್ಷ ಮೌಲ್ಯದ 780 ಗ್ರಾಂ ಚಿನ್ನ, 24 ಕೆಜಿ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟ್ಟರ್ನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಫರಾನ್ ಶೇಖ್, ಮುಖೇಶ್, ಫಾತೀಮಾ ಶೇಖ್, ಅಫ್ತಾಬ್ ಅಹ್ಮದ್ ಶೇಖ್ ಹಾಗೂ ತಲತ್ ಶೇಖ್ ಎಂಬ ಐವರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಕಳ್ಳರನ್ನು ಹೆಡೆಮುಡಿ ಕಟ್ಟಲು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಮೂರು ತಂಡಗಳನ್ನು ರಚನೆ ಮಾಡಿದ್ದರು. ಇದೀಗ ಸಿನಿಮಾ ರೀತಿಯಲ್ಲಿ ಕಳ್ಳರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.