ಬೆಂಗಳೂರು : ಕೇರಳದ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಹೊರ ತಂದ ಹೇಮಾ ಸಮಿತಿ ವರದಿ ಸದ್ದು ಮಾಡುತ್ತಿದ್ದು ಇದೀಗ ಅದೇ ಮಾದರಿಯ ಸಮಿತಿಯನ್ನು ಕರ್ನಾಟಕದಲ್ಲಿ ಕೂಡ ಸ್ಥಾಪನೆ ಮಾಡಬೇಕು ಎಂದು ಚಿತ್ರರಂಗದ ನಟ ನಟಿಯರು ಒತ್ತಾಯಿಸಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಕೇರಳದ ಹೇಮಾ ಮಾದರಿಯಲ್ಲಿ ಕರ್ನಾಟಕದಲ್ಲೂ ಸಮಿತಿ ರಚನೆ ಮಾಡಿ ಎಂದು, ಈಗಾಗಲೇ ನನ್ನನ್ನು ಚಿತ್ರರಂಗದ ಹಲವು ನಟ ನಟಿಯರು ಭೇಟಿಯಾಗಿ ಮನವಿ ಮಾಡಿದ್ದಾರೆ. ಈ ಕುರಿತಂತೆ ನಾವು ಸಮಿತಿ ರಚನೆ ಮಾಡುವುದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದರ ಮಧ್ಯ ಮಾಧ್ಯಮದ ಸಂದರ್ಶನ ವೇಳೆ ಶೂಟಿಂಗ್ ವೇಳೆ ತಮಗೆ ಆದಂತ ಅನುಭವದ ಕುರಿತು ನಟಿ ರಾಧಿಕಾ ಕುಮಾರಸ್ವಾಮಿ ಹಂಚಿಕೊಂಡಿದ್ದು, ನಾನು ಶೂಟಿಂಗ್ ನಲ್ಲಿದ್ದಾಗ ಸ್ಟಾರ್ಟಿಂಗ್ಸ್ ಹರಿದು ಹೋಗಿತ್ತು. ಸ್ಟಾಕಿಂಗ್ಸ್ ಹರಿದು ಹೋಗಿದೆ ಬೇರೆ ಕೊಡಿ ಅಂತ ಕೇಳಿದ್ದೆ. ಆಗ ನಿನ್ನ ಮುಖಕ್ಕೆ ಅದು ಬೇರೆ ಬೇಕಾ ಅಂತ ಅವಮಾನ ಮಾಡಿದರು. ನಮ್ಮ ಜೀವನದಲ್ಲಿ ಏನೋ ಒಂದು ಯಶಸ್ಸು ಕಾಣಬೇಕು, ಹೆಸರು ಮಾಡಬೇಕು ಅಂತ ಅನೇಕರು ಈ ಒಂದು ಇಂಡಸ್ಟ್ರಿಗೆ ಬರುತ್ತಾರೆ.
ಆದರೆ ಹಾಗೆ ಬರುವವರಿಗೆ ಅನೇಕ ರೀತಿಯಲ್ಲಿ ಕೆಟ್ಟ ಅನುಭವ ಆಗುತ್ತೆ. ಯಾವತ್ತು ಆ ರೀತಿ ತಪ್ಪು ಆಗಬಾರದು. ನನ್ನ ಜೀವನದಲ್ಲಿ ಆ ರೀತಿ ಅನುಭವ ಆಗಿಲ್ಲ ಆತರ ಏನಾದರೂ ನಡೆದರೆ ಇಂಡಸ್ಟ್ರಿಯಲ್ಲಿ ನಾವೆಲ್ಲ ಸೇರಿ ಯಾರು ಆ ರೀತಿ ಮಾಡುತ್ತಾರೆ ಅವರಿಗೆ ಶಿಕ್ಷೆ ಆಗಬೇಕು. ಎಲ್ಲೆಲ್ಲಿ ತಪ್ಪು ನಡೆಯುತ್ತದೆ ಅದನ್ನು ಅಲ್ಲಿಯೇ ನಿಲ್ಲಿಸಬೇಕು. ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರಿಗೆ ತೊಂದರೆ ಆಗಬಾರದು ಎಂದು ಅವರು ತಿಳಿಸಿದರು.