ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಅಜೇವಿನಲ್ಲಿ ಕೊಲೆ ಆರೋಪಿ ದರ್ಶನಗೆ ರಾಜಾತಿಥ್ಯ ನೀಡಿದ ವಿಚಾರವಾಗಿ ನಟ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ನನಗೆ ಯಾವುದೇ ರೌಡಿಗಳು ಸಹಾಯ ಮಾಡುವುದಗಿ ಹೇಳಿರಲಿಲ್ಲ ಎಂದು ತಿಳಿಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿದ್ದು, ಹಣ ಬಲದಿಂದ ಆಗಿರೋದು. 40 ಜನ ಇರುವ ಬ್ಯಾರಕ್ನಲ್ಲಿ ಶೌಚಾಲಯದ ಸಮಸ್ಯೆ ಕಷ್ಟವಾಗುತ್ತಿತ್ತು. ನನಗೆ ಯಾವುದೇ ರೌಡಿಗಳು ಸಹಾಯ ಮಾಡುವುದಾಗಿ ಹೇಳಲಿಲ್ಲ. ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜೈಲಿನಲ್ಲಿ ವ್ಯವಸ್ಥೆ ಸರಿ ಪಡಿಸುವ ಮನಸ್ಥಿತಿ ಇರಬೇಕು ಎಂದು ನಟ ಚೇತನ ಅಹಿಂಸಾ ತಿಳಿಸಿದರು.
ಇನ್ನೂ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾಚಿ ಶೀಟ್ ಸಲ್ಲಿಸಿದ ವಿಚಾರವಾಗಿ ಮಾತನಾಡಿದ ಅವರು, ಒತ್ತಡಕ್ಕೆ ಒಳಗಾಗದೆ ಸಾಕ್ಷಾಧಾರಗಳ ಆಧಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಸಾಕ್ಷಾಧಾರಕ್ಕೆ ಅನುಗುಣವಾಗಿ ನ್ಯಾಯ ಸಿಗುತ್ತಾ ಎಂದು ಕಾದು ನೋಡೋಣ. ಪೊಲೀಸರು ಕೆಲವೆಡೆ ಎಡವುತ್ತಿದ್ದಾರೆ. ಬಟ್ಟೆ ಬಿಚ್ಚಿ ಹೊಡೆಯುವುದು ತಪ್ಪು. ಪೊಲೀಸ್ ವ್ಯವಸ್ಥೆ ಸುಧಾರಣೆ ಆಗಬೇಕು ಎಂದು ಅವರು ತಿಳಿಸಿದರು.