ಬೆಳಗಾವಿ : ಬೆಳಗಾವಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಕ್ಸಮರ ಅತಿರೇಕಕ್ಕೆ ಏರಿದ್ದು, ಹಾಲಿ ಶಾಸಕ ರಾಜು ಕಾಗೆ, ಮಾಜಿ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ತಂಟೆಗೆ ಬಂದ್ರೆ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ಮೆರವಣಿಗೆ ಮಾಡುತ್ತೇನೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಹೌದು ಇಂದು ರಾಜು ಕಾಗೆ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜು ಕಾಗೆ, ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯೆತೆ ಇಲ್ಲ. ನೀನು ನನ್ನ ಬಗ್ಗೆ ಮಾತನಾಡ ಬೇಡ, ಅಪ್ಪಿ-ತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ ಎಂದು ನಾಲಿಗೆ ಹರಿಬಿಟ್ಟರು.
ಮುಂದುವರೆದು, ನೀನು ಬಹಳ ಸತ್ಯ ಹರಿಶ್ಚಂದ್ರ ತರಹ ಮಾತನಾಡುತ್ತಿದ್ದೀಯಾ. ನಿಮ್ಮ ಕಾರ್ಖಾನೆಯಲ್ಲಿ ಕಾಟಾ ಯಾರು ಹೊಡೆದ್ರಿ? ಕಾರ್ಮಿಕರ ದುಡ್ಡಿನಲ್ಲಿ ಹುಟ್ಟು ಹಬ್ಬ ಆಚರಿಸಿದವರು ಯಾರು? ಎಂದು ಪ್ರಶ್ನಿಸಿದರು. ಈ ಹಿಂದೆ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರಾಜು ಕಾಗೆ ಮಾಜಿ ಶಾಸಕ ಶ್ರೀಮಂತ್ ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ ಎನ್ನಲಾಗಿದೆ.