Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೀದರ್ ಎಸ್ಪಿಯಿಂದ ಕಿರುಕುಳ ಆರೋಪ : ಫೇಸ್ಬುಕ್ ಲೈವ್ ನಲ್ಲೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ!

03/04/2026 10:26 AM

ಮಣ್ಣಿನ ಘಮಲಿಗೆ ಮರುಳಾಗದವರಾರು? ಮಳೆಯ ಸುಗಂಧದ ಹಿಂದೆ ಅಡಗಿದೆ ರೋಚಕ ವಿಜ್ಞಾನ! ಏನಿದು ‘ಪೆಟ್ರಿಕೋರ್’ ರಹಸ್ಯ?

03/04/2026 10:23 AM

ಚಾಮರಾಜನಗರ : ಹಬ್ಬಕ್ಕೆಂದು ಊರಿಗೆ ಬಂದಾಗಲೇ ದುರಂತ : ಮದುವೆಗೆ ಒಪ್ಪದಕ್ಕೆ ನೇಣಿಗೆ ಶರಣಾದ ಪ್ರೇಮಿಗಳು!

03/04/2026 10:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 6,346 ಅನಕ್ಷರಸ್ಥ ಚುನಾಯಿತ ‘ಗ್ರಾಮ ಪಂಚಾಯ್ತಿ ಸದಸ್ಯ’ರಿಗೆ ‘ಅಕ್ಷರಾಭ್ಯಾಸ’
KARNATAKA

6,346 ಅನಕ್ಷರಸ್ಥ ಚುನಾಯಿತ ‘ಗ್ರಾಮ ಪಂಚಾಯ್ತಿ ಸದಸ್ಯ’ರಿಗೆ ‘ಅಕ್ಷರಾಭ್ಯಾಸ’

By kannadanewsnow0902/09/2024 4:54 PM

ಬೆಂಗಳೂರು: ಗ್ರಾಮ ಪಂಚಾಯಿತಿಗಳ 6,346 ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮವು ಸೆಪ್ಟೆಂಬರ್‌ 1ರಿಂದ ಆರಂಭಗೊಂಡಿದೆ. 21 ಜಿಲ್ಲೆಗಳಲ್ಲಿ ಅಕ್ಟೋಬರ್‌ 20ರ ವರೆಗೆ ಪ್ರತಿದಿನ 2 ಗಂಟೆಗಳಂತೆ 50 ದಿನ ಒಟ್ಟು 100 ಗಂಟೆ ತರಬೇತಿ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 94775 ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ ಸುಮಾರು ಶೇ.10 ರಷ್ಟು ಅನಕ್ಷರಸ್ಥರಿದ್ದಾರೆ ಎಂದು ಹೇಳಿರುವ ಸಚಿವರು ರಾಜ್ಯದಲ್ಲಿ 9357 ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ 7277 ಮಂದಿ ಮಹಿಳೆಯರಾಗಿದ್ದಾರೆ, ಕಳೆದ ವರ್ಷ 2403 ಮಹಿಳೆಯರು ಸೇರಿದಂತೆ 3011 ಮಂದಿಯನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮ ಆರಂಭವಾಗಿದೆ, ಸೋಮವಾರದಿಂದ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ 5234 ಮಂದಿ ಮಹಿಳಾ ಅನಕ್ಷರಸ್ಥರು ಹಾಗೂ 1112 ಪುರುಷ ಅಕ್ಷರ ಬಾರದವರು ಅಕ್ಷರ ಕಲಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಅನಕ್ಷರಸ್ಥ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಲ್ಲಿ ಓದು, ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗುವಂತೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದು ಗ್ರಾಮ ಪಂಚಾಯಿತಿ ಸಭಾ ನೋಟೀಸ್, ನಡಾವಳಿ, ಮಾರ್ಗಸೂಚಿಗಳನ್ನು ಸ್ವತಃ ಓದಿ ಅರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು, ಸ್ಥಳೀಯ ಆಡಳಿತದ ನೀತಿ ನಿರೂಪಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದು ಹಾಗೂ ಗ್ರಾಮ ಪಂಚಾಯಿತಿ ಸಭೆಗಳು, ಗ್ರಾಮಸಭೆ/ವಾರ್ಡ್‌ಸಭೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಆಶಯವಾಗಿರುತ್ತದೆ ಎಂದು ಹೇಳಿದ್ದಾರೆ.

2024ರ ಸೆಪ್ಟೆಂಬರ್‌ 1ರಿಂದ ಅಕ್ಟೋಬರ್‌ 20ರವರೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ, ಪ್ರತಿದಿನ ಎರಡು ಗಂಟೆಗಳಂತೆ 50 ದಿನಗಳಲ್ಲಿ 100 ಗಂಟೆಗಳ ಕಲಿಕೆಯನ್ನು ಪೂರ್ಣಗೊಳಿಸಲಾಗುವುದು, ಕಲಿಯುವವರಿಗೆ ಲೇಖನ ಸಾಮಗ್ರಿ ಹಾಗೂ ಓದುವ ಪುಸ್ತಕಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತದೆ ಹಾಗೂ ಬೋಧಕರಿಗೆ ಗೌರವಧನ ಹಾಗೂ ಶಿಕ್ಷಣಾರ್ಥಿಗಳಿಗೆ ಗೌರವಧನದೊಂದಿಗೆ ಪ್ರಮಾಣಪತ್ರ ನೀಡಲಾಗುವುದು ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ: ಸೆ.9ಕ್ಕೆ ಎಜಿ, ಸೆ.12ಕ್ಕೆ ಅಭಿಷೇಕ್ ಮನುಸಿಂಘ್ವಿ ಹೈಕೋರ್ಟ್ ನಲ್ಲಿ ವಾದ

BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!

ಏನಿದು ‘ಚುಂಬನ ಕಾಯಿಲೆ’.? ಹೇಗೆ ಹರಡುತ್ತೆ.? ಲಕ್ಷಣಗಳೇನು.? ಚಿಕಿತ್ಸೆ ಹೇಗೆ.? ಇಲ್ಲಿದೆ ಮಾಹಿತಿ.!

Share. Facebook Twitter LinkedIn WhatsApp Email

Related Posts

BREAKING : ಬೀದರ್ ಎಸ್ಪಿಯಿಂದ ಕಿರುಕುಳ ಆರೋಪ : ಫೇಸ್ಬುಕ್ ಲೈವ್ ನಲ್ಲೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ!

03/04/2026 10:26 AM1 Min Read

ಚಾಮರಾಜನಗರ : ಹಬ್ಬಕ್ಕೆಂದು ಊರಿಗೆ ಬಂದಾಗಲೇ ದುರಂತ : ಮದುವೆಗೆ ಒಪ್ಪದಕ್ಕೆ ನೇಣಿಗೆ ಶರಣಾದ ಪ್ರೇಮಿಗಳು!

03/04/2026 10:16 AM1 Min Read

SHOCKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಕಾಲಿನಿಂದ ಕುತ್ತಿಗೆ ಹಿಸುಕಿ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಅರೆಸ್ಟ್!

03/04/2026 10:10 AM1 Min Read
Recent News

BREAKING : ಬೀದರ್ ಎಸ್ಪಿಯಿಂದ ಕಿರುಕುಳ ಆರೋಪ : ಫೇಸ್ಬುಕ್ ಲೈವ್ ನಲ್ಲೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ!

03/04/2026 10:26 AM

ಮಣ್ಣಿನ ಘಮಲಿಗೆ ಮರುಳಾಗದವರಾರು? ಮಳೆಯ ಸುಗಂಧದ ಹಿಂದೆ ಅಡಗಿದೆ ರೋಚಕ ವಿಜ್ಞಾನ! ಏನಿದು ‘ಪೆಟ್ರಿಕೋರ್’ ರಹಸ್ಯ?

03/04/2026 10:23 AM

ಚಾಮರಾಜನಗರ : ಹಬ್ಬಕ್ಕೆಂದು ಊರಿಗೆ ಬಂದಾಗಲೇ ದುರಂತ : ಮದುವೆಗೆ ಒಪ್ಪದಕ್ಕೆ ನೇಣಿಗೆ ಶರಣಾದ ಪ್ರೇಮಿಗಳು!

03/04/2026 10:16 AM

ಮಣ್ಣಿನ ಘಮಲಿಗೆ ಮನಸೋಲದವರಿಲ್ಲ : ಮಳೆಯ ಸುಗಂಧದ ಹಿಂದೆ ಅಡಗಿದೆ ರೋಚಕ ವಿಜ್ಞಾನ! ಏನಿದು ‘ಪೆಟ್ರಿಕೋರ್’ ರಹಸ್ಯ?

03/04/2026 10:15 AM
State News
KARNATAKA

BREAKING : ಬೀದರ್ ಎಸ್ಪಿಯಿಂದ ಕಿರುಕುಳ ಆರೋಪ : ಫೇಸ್ಬುಕ್ ಲೈವ್ ನಲ್ಲೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ!

By kannadanewsnow0503/04/2026 10:26 AM KARNATAKA 1 Min Read

ಬೀದರ್ : ಬೀದರ್ ಜಿಲ್ಲೆಯ ಯೂಟ್ಯೂಬರ್ ಸಲ್ಮಾನ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂದು…

ಚಾಮರಾಜನಗರ : ಹಬ್ಬಕ್ಕೆಂದು ಊರಿಗೆ ಬಂದಾಗಲೇ ದುರಂತ : ಮದುವೆಗೆ ಒಪ್ಪದಕ್ಕೆ ನೇಣಿಗೆ ಶರಣಾದ ಪ್ರೇಮಿಗಳು!

03/04/2026 10:16 AM

SHOCKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಕಾಲಿನಿಂದ ಕುತ್ತಿಗೆ ಹಿಸುಕಿ ಪತ್ನಿಯ ಬರ್ಬರ ಹತ್ಯೆ, ಆರೋಪಿ ಪತಿ ಅರೆಸ್ಟ್!

03/04/2026 10:10 AM

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ನಿಮ್ಮ ಬೆಲೆಬಾಳುವ ಒಡವೆಗಳಿಗೆ ಈಗ ‘ವಿಮೆ’ ರಕ್ಷಣೆ!

03/04/2026 9:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.