ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿ ಕಡಿತದಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇದೀಗ ಬೀದಿನಾಯಿಗಳ ದಾಳಿಗೆ ನಿವೃತ್ತ ಶಿಕ್ಷಕಿ ಬಲಿಯಾದ ಘಟನೆ ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ನೆಲೆಯ 7ನೇ ವಸತಿಗೃಹ ಕ್ಯಾಂಪಸ್ನಲ್ಲಿ ನಡೆದಿದೆ.
ಹೌದು ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿಯನ್ನು ರಾಜ್ದುಲಾರಿ ಸಿನ್ಹಾ(76) ಎಂದು ಗುರುತಿಸಲಾಗಿದ್ದು, ವಾಕಿಂಗ್ ಮಾಡುತ್ತಿದ್ದಾಗ, ರಾಜ್ದುಲಾರಿ ಸಿನ್ಹಾ ಮೇಲೆ ಸುಮಾರು 10 ರಿಂದ 12 ಬೀದಿ ನಾಯಿಗಳು ದಾಳಿ ಮಾಡಿದ್ದವು. ಇದರಿಂದ ಗಂಭೀರ ಗಾಯಗೊಂಡಿದ್ದ ರಾಜ್ದುಲಾರಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.