ಬೆಂಗಳೂರು : ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ಕೋರಿ ಬಿಜೆಪಿಯ ಸಂಸದ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿಗೆ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತಾಗಿ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದು, ಸ್ವೀಟ್ ನಲ್ಲಿ ದಮ್ಮು ತಾಕತ್ತು ಇರುವ ಬಿಜೆಪಿ ನಾಯಕರು ತಂದೆಯಾಜ್ಞೆ ತರುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದೆ.
ಈ ಕುರಿತಂತೆ ಕಾಂಗ್ರೆಸ್ ತನ್ನ X ಖಾತೆಯಲ್ಲಿ ಬಸವರಾಜ್ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದು, ದಮ್ಮು ತಾಕತ್ತಿನ @BJP4Karnataka ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ? ಮಾಜಿ ಮುಖ್ಯಮಂತ್ರಿ @BSBommai ಅವರೂ ಕೂಡ ತಮಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತರಲು ಕೋರ್ಟ್ ಮೆಟ್ಟಿಲೇರಿದ ಸುದ್ದಿ ಬಂದಿದೆ,
ಬೊಮ್ಮಾಯಿಯವರಿಗೆ ಕಾಡುತ್ತಿರುವ ಭೀತಿಯಾದರೂ ಯಾವುದು? ಈ ಭೀತಿಗೆ ಕಾರಣವಾಗುವಂತಹ ಯಾವ ಘನಂದಾರಿ ಕೆಲಸ ಮಾಡಿದ್ದಾರೆ? ಕೆ. ಸುಧಾಕರ್ ಅವರು “ಯಾರೂ ಏಕಪತ್ನಿ ವ್ರತಸ್ಥರಲ್ಲ“ ಎಂದಿದ್ದಕ್ಕೂ ಈ ತಡೆಯಾಜ್ಞೆಗೂ ಸಂಬಂಧವಿದೆಯೇ? ಎಂದು ಪ್ರಶ್ನಿಸಿದೆ.
ದಮ್ಮು ತಾಕತ್ತಿನ @BJP4Karnataka ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ?
ಮಾಜಿ ಮುಖ್ಯಮಂತ್ರಿ @BSBommai ಅವರೂ ಕೂಡ ತಮಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತರಲು ಕೋರ್ಟ್ ಮೆಟ್ಟಿಲೇರಿದ ಸುದ್ದಿ ಬಂದಿದೆ,
ಬೊಮ್ಮಾಯಿಯವರಿಗೆ ಕಾಡುತ್ತಿರುವ ಭೀತಿಯಾದರೂ ಯಾವುದು?
ಈ ಭೀತಿಗೆ ಕಾರಣವಾಗುವಂತಹ ಯಾವ ಘನಂದಾರಿ… pic.twitter.com/Jw9yeCg9Nz— Karnataka Congress (@INCKarnataka) August 28, 2024