ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ A1 ಆರೋಪಿ ಆಗಿರುವಂತಹ ನಟಿ ಪವಿತ್ರಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪವಿತ್ರಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೇಬಸ್ಟಿಯನ್ ವಾದ ಮಂಡಿಸಿದ್ದು, ಮಹಿಳೆ ಎಂಬುದನ್ನು ಪರಿಗಣಿಸಿ ಪವಿತ್ರ ಗೌಡಗೆ ಜಾಮೀನು ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ವಿಚಾರಣೆಯ ವೇಳೆ A1 ಆರೋಪಿಯಾಗಿರುವಂತಹ ಪವಿತ್ರಗೌಡ ಪರವಾಗಿ ಹಿರಿಯ ವಕೀಲ ಟಾಮಿ ಸೇಬಸ್ಟಿಯನ್ ವಾದ ಮಂಡಿಸಿದ್ದು, ಮೊದಲಿಗೆ ಅಪರಿಚಿತ ಆರೋಪಿಗಳ ವಿರುದ್ಧ FIR ದಾಖಲಾಯಿತು. ಪವಿತ್ರ ಗೌಡ, ದರ್ಶನ್ ಮತ್ತಿತರ ಆರೋಪಿಗಳ ಜೊತೆ ಸೇರಿ, ಕೊಲೆಗೆ ಸಂಚು. ಕೊಲೆಯಾದ ರೇಣುಕಾ ಸ್ವಾಮಿ ಮೊಬೈಲ್ ಇಂದ ಮೆಸೇಜ್ ಬಂದಿತ್ತು.
ಪವಿತ್ರ ಗೌಡ ಇನ್ಸ್ಟಾಗ್ರಾಮ್ ಗೆ ಮೆಸೇಜ್ ಬಂದಿತ್ತು. A3 ಆರೋಪಿ ಪವನಿಗೆ ಸೇರಿದ ಮೊಬೈಲ್ ನಂಬರ್ ಅನ್ನು ತನ್ನದೆಂದು ರೇಣುಕಾ ಸ್ವಾಮಿಗೆ ಪವಿತ್ರಗೌಡ ನೀಡಿದ್ದಳು. ಆ ನಂಬರಿಗೆ ವಾಟ್ಸಾಪ್ ಗೆ ಮಾಡುವಂತೆ ರೇಣುಕಾ ಸ್ವಾಮಿಗೆ ಸೂಚಿಸಿದ್ದಳು. ಅಲ್ಲದೆ ಆ ನಂಬರ್ಗೆ ಕರೆ ಮಾಡುವಂತೆ ಪವಿತ್ರ ಗೌಡ ರೇಣುಕಾ ಸ್ವಾಮಿಗೆ ಸೂಚಿಸಿದ್ದಳು. ಪವಿತ್ರ ನಂಬರ್ ಎಂದುಕೊಂಡು ಪವನ್ ನಂಬರ್ ಗೆ ರೇಣುಕಾ ಸ್ವಾಮಿ ಕರೆ ಮಾಡಿದ್ದಾನೆ.
ಈ ವೇಳೆ ಪವಿತ್ರ ಗೌಡ ರೇಣುಕಾಸ್ವಾಮೀ ಜೊತೆಗೆ ಮಾತನಾಡಿದ್ದಾಳೆ. ನಂತರ ಪವನ್ ಪವಿತ್ರ ಗೌಡರ ರೀತಿ ವಾಟ್ಸಪ್ ನಲ್ಲಿ ಚಾಟ್ ಮುಂದುವರಿಸಿದ್ದಾನೆ. ರೇಣುಕಾಸ್ವಾಮಿ ಅಪಹರಿಸುವ ಉದ್ದೇಶದಿಂದ ಪವಿತ್ರ, ಪವನ್ ಹೀಗೆ ಮಾಡಿದ್ದರು. ಅಪಹರಣದ ಪ್ಲಾನ್ ದರ್ಶನ್ ಜೊತೆ ಮಾತಾಡಿ ಒಪ್ಪಿಗೆ ಪಡೆದಿದ್ದರು. ನಂತರ ಅಪಹರಿಸಿ ಕೊಲೆ ಮಾಡಲು A4 ನೊಂದಿಗೆ ಪ್ಲಾನ್ ಮಾಡಿದರು.
ಪವಿತ್ರ ಹೆಸರಲ್ಲಿ ಚಾಟಿಂಗ್ ವೇಳೆ ರೇಣುಕಾ ಸ್ವಾಮಿ ಲೊಕೇಶನ್ ಪಡೆದುಕೊಂಡಿದ್ದರು. ಲೊಕೇಶನ್ ಪಡೆದು A4 ಗೆ ಶೇರ್ ಮಾಡಿದ್ದರು. A4, A6, A7 ರೇಣುಕಾ ಸ್ವಾಮಿಯನ್ನು ಆಟೋ ರಿಕ್ಷಾದಲ್ಲಿ ಹಿಂಬಾಲಿಸಿದರು. ಚಿತ್ರದುರ್ಗದ ಬಾಲಾಜಿ ಬಾರ್ ಬಳಿ ರೇಣುಕಾ ಸ್ವಾಮಿಯನ್ನು ಅಪಹರಿಸಿದರು. A8ರ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಬೆಂಗಳೂರಿಗೆ ಕರೆ ತಂದರು ಕೈಗಡಿಯಾರವನ್ನು ಕಿತ್ತುಕೊಂಡರು. ಎಲ್ಲವನ್ನು ಆರೋಪಿಗಳಿಂದ ವಶಪಡೆಯಲಾಗಿದೆ. A4, A6, A7, A8, ಗಳು A3, A10 ಸೂಚನೆಯಂತೆ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಗೆ ರೇಣುಕಾಸ್ವಾಮಿಯನ್ನು ಕರೆತಂದರು.
ಪವಿತ್ರ ಗೌಡ ವಿರುದ್ಧದ ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಹೀಗಾಗಿ ಜಾಮೀನು ನೀಡುವಂತೆ ಪವಿತ್ರ ಗೌಡ ಪರ ವಕೀಲರು ಮನವಿ ಮಾಡಿದ್ದಾರೆ ಮಹಿಳೆಯರು, ವೃದ್ಧರಿಗೆ, ಅಪ್ರಾಪ್ತರಿಗೆ ಸುಲಭವಾಗಿ ಜಾಮೀನು ನೀಡಲಾಗುತ್ತಿತ್ತು. ಈ ಕೇಸ್ ನಲ್ಲೂ ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಿ. ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿರುವುದನ್ನು ಪರಿಗಣಿಸಬೇಕು ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ, ಪವಿತ್ರ ಗೌಡ ಪರ ಹಿರಿಯ ವಕೀಲ ಟಾಮಿ ಸೇಬಸ್ಟಿಯನ್ ವಾದಿಸಿದರು.