ಬೆಂಗಳೂರು : ಆಗ ತಾನೇ ಜನಿಸಿದ ಮಕ್ಕಳಿಗೆ ಆಹಾರ ತಿನ್ನಿಸಲು ತಾಯಂದಿರು ಸೆರೆಲಾಕ್ ಅನ್ನು ಬಳಸುತ್ತಾರೆ. ಆದರೆ ಈ ಒಂದು ಬಾಕ್ಸ್ ಇದೀಗ ಸಮಾಜದ ಘಾತುಕ ಕೆಲಸಕ್ಕೆ ಬಳಸಿದ್ದು, ಸೆರೆಲ್ಯಾಕ್ ಬಾಕ್ಸ್ ನಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವನ್ನನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸಪುರದ ಬಳಿಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಬೆಂಗಳೂರಿನಲ್ಲಿ ಪೊಲೀಸರು ಎಷ್ಟೇ ಕರೀನಾ ಕಮ ಕೈಗೊಂಡರು ಕೂಡ ಶಾಲಾ ಕಾಲೇಜುಗಳಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಲೀಲಾಜಾಲವಾಗಿ ನಡೆಯುತ್ತಿದೆ. ಇದೀಗ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸೆರೆಲಾಕ್ ಬಾಕ್ಸ್ ಇಟ್ಟು ಆರೋಪಿಯೂ ಡ್ರಗ್ಸ್ ಮಾರುತಿದ್ದ ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿಯಿಂದ 6 ಕೋಟಿ ಮೌಲ್ಯದ ನಾಲ್ಕು ಕೆಜಿ ಡ್ರಗ್ಸ್ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸಪುರದ ಬಾಡಿಗೆ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಸೆರೆಲಾಕ್ ಬಾಕ್ಸ್ನಲ್ಲಿ ಡ್ರಗ್ಸ್ ಸಾಗಾಟ ಮಾಡಲಾಗಿತ್ತು. ನಂತರ ಆರೋಪಿಯು ಸಣ್ಣ ಸಣ್ಣ ಪ್ಯಾಕ್ ಮಾಡಿ ಆರೋಪಿ ಡ್ರಗ್ಸ್ ಮಾರುತಿದ್ದ ಎಂದು ತಿಳಿದುಬಂದಿದೆ.