ಬೆಂಗಳೂರು : ನಾನು 40 ವರ್ಷಗಳ ಕಾಲ ಕಳಂಕರಹಿತ ರಾಜಕೀಯ ಜೀವನ ನಡೆಸಿದಕ್ಕೆ ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷದವರು ವೈಯಕ್ತಿಕ ದಾಳಿ ಮಾಡಿ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮ೦ತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ, ಮುಡಾ ನಿವೇಶನ ಹಂಚಿಕೆ ಹಗರಣ ಮತ್ತು ವಾಲ್ಮೀಕಿ ನಿಗಮ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಘೋಷಣೆಗಳನ್ನು ಕೂಗಿದವು. ಗದ್ದಲದ ನಡುವೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು 40 ವರ್ಷಗಳ ಕಾಲ ಹಿತ ರಾಜಕೀಯ ಜೀವನ ನಡೆಸಿದ್ದೇನೆ ಇದರಿಂದಾಗಿ ವಿಪಕ್ಷಗಳು ಹೊಟ್ಟೆಕಿಚ್ಚಿನಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಿ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
2016ರಲ್ಲಿ ನಾನು ಆಗಿದ್ದಾಗಲೂ ಸೈಟ್ ಪಡೆದಿರಲಿಲ್ಲ. 2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 50:50 ಹಂಚಿಕೆ ನಿಯಮ ಮಾಡಿ, ಅವರ ಅವಧಿಯಲ್ಲೇ ನಮ್ಮ ಕುಟುಂಬಕ್ಕೆ ಸೈಟ್ ಹಂಚಿಕೆ ಮಾಡಲಾಗಿದೆ. ಇಂತಹ ಜಾಗದಲ್ಲೇ ಸೈಟ್ ಬೇಕು ಎಂದು ನಾನು ಕೇಳಿರಲಿಲ್ಲ. ಹಂಚಿಕೆಯು ಕಾನೂನು ಪ್ರಕಾರವೇ ಆಗಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಅವರು ತಿಳಿಸಿದರು.