ಬೆಂಗಳೂರು : ಮುಡಾದಲ್ಲಿ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ವಿಧಾನಸೌಧದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದರು. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಾ ಅರವಿಂದ ಬೆಲ್ಲದ ಮಾತನಾಡಿ, ಜುಲೈ 29ಕ್ಕೆ ಅಂದರೆ ಸೋಮವಾರದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ. ಮೂಡ ಹಗರಣದ ಚರ್ಚೆಗೆ ಇಂದು ಕೂಡ ಮನವಿ ಮಾಡುತ್ತೇವೆ ಈ ಒಂದು ಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದಾರೆ ಅಧಿವೇಶನದಲ್ಲಿ ಚರ್ಚೆಯಾದರೆ ಸತ್ಯ ಸತ್ಯತೆ ಹೊರಬರಲಿದೆ. ಈ ಹಿಂದೆ ಅರ್ಕಾವತಿ ಹಗರಣ ಆಗಿದ್ದಾಗ ಸಿಎಂ ಸಿದ್ದರಾಮಯ್ಯ ಧರಣಿ ಮಾಡಿದ್ದರು. ಹಾಗಾಗಿ ನಾವು ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ. ಹಗರಣ ಖಂಡಿಸಿ ಪಾದಯಾತ್ರೆ ಮಾಡುತ್ತೇವೆ. ಇಂದು ಅಹೋರಾತ್ರಿಯ ಧರಣಿಯಾಯಿತು ಇದೀಗ ಪಾದಯಾತ್ರೆಗೆ ಬಿಜೆಪಿ ಸಜ್ಜಾಗಿದೆ.
ಮುಡಾದಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ಹಗರಣ ನಡೆದಿದೆ. ಮುಖ್ಯಮಂತ್ರಿಗಳು ಹಾಗೂ ಕುಟುಂಬದವರು ಇದರಲ್ಲಿ ಭಾಗಿಯಾಗಿದ್ದಾರೆ ಅಂತಾ ದಿನದಿಂದ ದಿನಕ್ಕೆ ದಾಖಲೆಗಳು ಹೊರಬರುತ್ತವೆ. ಹಗರಣದ ಕುರಿತಂತೆ ಬಗೆದಷ್ಟು ದಾಖಲೆಗಳು ಹೊರಬರುತ್ತಿವೆ.ಜನರ ಮುಂದೆ ಸತ್ಯಾಸತ್ಯ ಕುರಿತು ಹೊರಬರಲಿ ಚರ್ಚೆ ಮಾಡಕ್ಕೆ ಏನು ತೊಂದರೆ ಎಂದು ಪ್ರಶ್ನಿಸಿದರು.