ಚಿತ್ರದುರ್ಗ : ಚಿತ್ರದುರ್ಗ ಮುರುಘರಾಜೇಂದ್ರ ಮಠದ ಹಣಕಾಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆ ಆರೋಪದಿಂದ ಎಸ್.ಕೆ.ಬಸವರಾಜನ್ ಖುಲಾಸೆಗೊಂಡಿದ್ದಾರೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ನಿನ್ನೆ ಎಸ್. ಕೆ.ಬಸವರಾಜನ್ ಅವರನ್ನು ವಂಚನೆ ಆರೋಪದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಮುರಘಾ ಮಠದ SJM ಕೋ-ಆಪರೇಟಿವ್ ಸುಸೈಟಿ ಹಣದಿಂದ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಆರೋಪಿ ಬಸವರಾಜನ್ ವಿರುದ್ಧ ದೂರು ನೀಡಲಾಗಿತ್ತು. ಮಠದ ಪರವಾಗಿ ವಿಜಯಕುಮಾರ್ ಎನ್ನುವರು 2013ರ ಆಗಷ್ಟ್ 16ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಈ ಪ್ರಕರಣವನ್ನು ಕೋರ್ಟ್ ವಜಾ ಮಾಡಿದೆ. ಇದರಿಂದ ಮುರುಘರಾಜೇಂದ್ರ ಮಠದ ಹಣಕಾಸು ದುರುಪಯೋಗ, ವಂಚನೆ ಆರೋಪದಿಂದ ಎಸ್.ಕೆ.ಬಸವರಾಜನ್ ಅವರು ಖುಲಾಸೆಗೊಂಡಿದ್ದಾರೆ.ಮಾಜಿ ಶಾಸಕರಾಗಿರುವ ಬಸವರಾಜನ್ ಅವರು ಮುರುಘಾ ಮಠದ ಮಾಜಿ ಆಡಳಿತಾಧಿಕಾರಿಯಾಗಿದ್ದರು.