ಬೆಂಗಳೂರು : ಕಾಂಗ್ರೆಸ್ ಪುರಸಭಾ ಸದಸ್ಯನನ್ನ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಗೈದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್ ಪುರ ಬಳಿ ನಿನ್ನೆ ರಾತ್ರಿ ನಡೆದಿದೆ. ಆನೇಕಲ್ ಪುರಸಭಾ ಸದಸ್ಯ ರವಿ ಎಂಬಾತನೇ ಕೊಲೆಯಾದ ದುರ್ದೈವಿ. ಮುಖಕ್ಕೆ ಬಟ್ಟೆ ಸುದ್ದಿ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಲ್ಲೂಕಿನ ಪುರಸಭೆಯ ಸದಸ್ಯ ರವಿ ಆಲಿಯಾಸ್ ಸ್ಕ್ರಾಪ್ ರವಿ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸಿಕ್ಕ ಸಿಕ್ಕ ಕಡೆ ಮಚ್ಚು ಬೀಸಿ ಕೊಲೆಗೈದಿರುವಂತ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೇ ವೈಷಮ್ಯದಿಂದ ಕೊಲೆ ಮಾಡಿರೋದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಂಚು ಹಾಕಿ ರವಿಯನ್ನ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ನಡೆಸ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್.ಪಿ.ಸಿ.ಕೆ ಬಾಬಾ ಅವರು, ರಾತ್ರಿ 8.30 ಸುಮಾರಿಗೆ ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೇ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ ಮಾಡಿದ್ದೇವೆ.