ಮುಂಬೈ: ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಪಂಡಿತ್ ಅವರ ವಿವಾಹವು ( Anant Ambani and Radhika Merchant’s wedding ) ಅದ್ಧೂರಿಯಾಗಿ ನಡೆಯುತ್ತಿದೆ. ಈ ಮದುವೆಗೆ ಅಮಂತ್ರಣ ಇತ್ತವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ. ಹೀಗಿದ್ದರೂ ಅವರ ಮದುವೆಗೆ ಆಹ್ವಾನವಿಲ್ಲದೆ ಪ್ರವೇಶಿಸಿದಂತ ಇಬ್ಬರು ಯೂಟ್ಯೂಬರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೌದು ಅನಂತ್ ಅಂಬಾನಿ ಮದುವೆಗೆ ( anant ambani wedding ) ಆಹ್ವಾನಿವಿಲ್ಲದೇ ಪ್ರವೇಶಿಸಿದಂತ ಇಬ್ಬರು ಯ್ಯೂಟೂಬರ್ ಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅನುಮತಿಯಿಲ್ಲದೆ ಪ್ರವೇಶಿಸಿದವರಲ್ಲಿ ಒಬ್ಬರು ಯೂಟ್ಯೂಬರ್ ವೆಂಕಟೇಶ್ ನರಸಯ್ಯ ಅಲ್ಲೂರಿ (26) ಮತ್ತು ಇನ್ನೊಬ್ಬ ವ್ಯಕ್ತಿ ಲುಕ್ಮಾನ್ ಮೊಹಮ್ಮದ್ ಶಫಿ ಶೇಖ್ (28) ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಮುಂಬೈನ ಬಿಕೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅವರು ಮದುವೆಯಲ್ಲಿ ಭಾಗವಹಿಸಲು ಆಂಧ್ರಪ್ರದೇಶದಿಂದ ಬಂದಿದ್ದರು. ಎರಡೂ ಪ್ರಕರಣಗಳಲ್ಲಿ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಂಡ ನಂತರ ಪೊಲೀಸರು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
Two people entered Anant Ambani and Radhika Merchant's wedding without an invitation, police registered a case against both of them. One of them who entered without permission is Venkatesh Narasaiya Alluri (26) who is a YouTuber and the other person is Lukman Mohammad Shafi…
— ANI (@ANI) July 14, 2024
BREAKING: ಜಮ್ಮು-ಕಾಶ್ಮೀರದ ಕುಪ್ವಾರನ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಯತ್ನಿಸಿದ ಮೂವರು ಉಗ್ರರ ಹತ್ಯೆ