ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪ ಚುನಾವಣೆ ಇದೀಗ ಭಾರಿ ಮಹತ್ವ ಪಡೆದುಕೊಂಡಿದ್ದು, ಕಾಂಗ್ರೆಸ್ ಪರವಾಗಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಲಿದ್ದು,, ಇನ್ನೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮಗಳು ಅನುಸೂಯ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಸುದ್ದಿ ಹರಿದಾಡಿತ್ತು.
ಇದೀಗ ಈ ಒಂದು ಊಹಾಪೋಹಗಳಿಗೆ ಸಂಸದ ಡಾ.ಸಿಎನ್ ಮಂಜುನಾಥ್ ಅವರು ತೆರೆ ಎಳೆದಿದ್ದು, ನೂರಕ್ಕೆ ನೂರರಷ್ಟು ಅನುಸೂಯ ಈ ಒಂದು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅನುಸೂಯ ಸ್ಪರ್ಧೆ ವಿಚಾರವಾಗಿ ನಾನು ಸ್ಪಷ್ಟಪಡಿಸುತ್ತಿದ್ದೇನೆ ನೂರಕ್ಕೆ ನೂರರಷ್ಟು ಅನುಸೂಯ ಸ್ಪರ್ಧಿಸುವುದಿಲ್ಲ ಎಂದರು.
ಬೆಂಗಳೂರಿನಲ್ಲಿ ಬಿಜೆಪಿಯ ಸಂಸದ ಡಾ.ಸಿ. ಮಂಜುನಾಥ್ ಸ್ಪಷ್ಟನೆ ನೀಡಿದ ಅವರು, i ವಿಷಯ ಕೆಲ ಮಾಧ್ಯಮಗಳಲ್ಲಿ ಈ ಸುದ್ದಿ ಬಂದಿದ್ದು ನನಗೆ ತುಂಬಾ ಮುಜುಗರ ತರಿಸಿದೆ ಯಾವುದೇ ಕಾರಣಕ್ಕೂ ಅನುಸೂಯ ಅವರು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಬಿಜೆಪಿ ಸಂಸದ ಡಾ. ಸಿ ಎನ್ ಮಂಜುನಾಥ್ ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ
ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣ ಹೆಚ್ಚಳ ವಿಚಾರವಾಗಿ ಬೆಂಗಳೂರಿನಲ್ಲಿ ಸಂಸದ ಡಾ. ಸಿ ಎನ್ ಮಂಜುನಾಥ ಹೇಳಿಕೆ ನೀಡಿದ್ದು ಸೊಳ್ಳೆಗಳನ್ನು ನಾಶ ಮಾಡಿದರೆ ಮಾತ್ರ ಡೆಂಘಿ ನಿಯಂತ್ರಣ ಸಾಧ್ಯ ಡೆಂಘಿಯನ್ನು ತಡೆಯದಿದ್ದರೆ ಚಿಕನ್ ಗುನ್ಯಾ, ಝೀಕಾ ಸೋಂಕು ಬರಬಹುದು. ಕೋವಿಡ್ ಪ್ಯಾಂಡಮಿಕ್ ಆಗಿದ್ದರೆ ಡೆಂಘಿ ಎಂಡಮಿಕ್ ಆಗಿದೆ. ಎಂಡಮಿಕ್ ಆಗಿದ್ದರಿಂದ ರಾಜ್ಯಾದ್ಯಂತ ಡೆಂಘಿ ಹರಡಿರುವುದು ಡೆಂಘಿ ರೋಗ ತಡೆಯಲು ತುರ್ತು ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಬೇಕು ಎಂದು ಅವರು ತಿಳಿಸಿದರು.