ದಾವಣಗೆರೆ : ದಾವಣಗೆರೆ ರಾಮನಗರದ ಎಸ್ಒಜಿ ಕಾಲೋನಿ ಮನೆಯಲ್ಲಿ ಮಂಗಳವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸಿಲಿಂಡರ್ ಸ್ಪೋಟದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪಾವರ್ತಮ್ಮ ಎಂಬುವರು ಸಾವನ್ನಪ್ಪಿದ್ದಾರೆ.
ಉಳಿದ ನಾಲ್ವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಐದು ಜನರಲ್ಲಿ ಲಲಿತಮ್ಮ ಇವರಿಗೆ ಹೆಚ್ಚಿನ ಗಾಯವಾಗಿದೆ, ಸೌಭಾಗ್ಯ ಇವರಿಗೆ ಶೇ 50 ಕ್ಕಿಂತ ಹೆಚ್ಚು ಗಾಯವಾಗಿದ್ದು, ಉಳಿದ ಇಬ್ಬರಿಗೆ ಶೇ 50 ಕ್ಕಿಂತ ಕಡಿಮೆ ಇದೆ.