ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣದ ಎ 1 ಆರೋಪಿಯಾಗಿರುವ ಪವಿತ್ರ ಗೌಡ ಕೂಡ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದು ನನ್ನ ಕಣ್ಣೆದುರಲ್ಲಿಯೇ ದರ್ಶನ್ ಅವರು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರೆದರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು ಪ್ರಕಾರಣಕ್ಕೆ ಸಂಬಂಧಸಿದಂತೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಆತನ 2ನೇ ಪತ್ನಿ ಸೇರಿದಂತೆ 17 ಜನರ ಗ್ಯಾಂಗ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಈ ವೇಳೆ ನಟಿ ಪವಿತ್ರಾಗೌಡನನ್ನು ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿಗೆ ನಾನು ಚಪ್ಪಲಿಯಿಂದ ಒಂದು ಏಟು ಹೊಡೆದೆ. ಆದರೆ, ದರ್ಶನ್ ನನ್ನ ಮುಂದೆಯೇ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ಎ1 ಆರೋಪಿ ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಪೊಲೀಸರ ಮುಂದೆ ಪವಿತ್ರಗೌಡ ಹೇಳಿದ್ದೇನು?
ನಾನು ಶೆಡ್ ಗೆ ಹೋಗುವುದಕ್ಕು ಮುಂಚಿನಿಂದಲೂ ದರ್ಶನ್ ಶೆಡ್‌ನಲ್ಲಿದ್ದನು.ನಾನು ಚಪ್ಪಲಿಯಲ್ಲಿ ಒಂದು ಏಟು ಹೊಡೆದಿದ್ದು ನಿಜ, ದರ್ಶನ್ ರೇಣುಕಾ ಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದು ನಿಜ ಎಂದು ಪವಿತ್ರಗೌಡ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.