ಬೆಂಗಳೂರು: ಉತ್ತರ ಕನ್ನಡದ ಬನವಾಸಿಯಲ್ಲಿ ಎನ್ಐಎ ದಾಳಿ ನಡೆಸಿದ್ದು, ಬನವಾಸಿ ಮೂಲದ ಅಬ್ದುಲ್ ಶುಕೂರ್ ಎನ್ನುವವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿ ಆನ್ ಲೈನ್ ಮೂಲಕ ಉಗ್ರರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಈತ ಬೆಂಗಳೂರು ಕೆಫೆ, ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಗಳಿಗೆ ಪ್ರಚೋಧನೆ ನೀಡುತ್ತಿದ್ದ ಎನ್ನಲಾಗಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಈತ ಮೊನ್ನೆ ಬಕ್ರೀದ್ ಹಬ್ಬದ ಸಲುವಾಗಿ ಊರಿಗೆ ಬಂದಿದ್ದ ವೇಳೆಯಲ್ಲಿ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ. ಈ ನಡುವೆ ಈತನ ವಿರುದ್ದ ನಕಲಿ ಪಾಸ್ಪೋರ್ಟ್ ಆರೋಪ ಕೇಳಿ ಬಂದಿದೆ.