ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣ ಕಳ್ಳತನಕ್ಕೆ ಹೋಗಿದ್ದಾಗ ಇಬ್ಬರೂ ಕಳ್ಳರ ಮೇಲೆ ಕೂಲಿಕಾರ್ಮಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರಿಂದ ಘಟನೆಯಲ್ಲಿ ಓರ್ವ ಕಳ್ಳ ಸಾವನಪ್ಪಿದ್ದು ಮತ್ತು ಅವರ ಮನೆಗೆ ಗಂಭೀರವಾದಂತಹ ಗಾಯವಾಗಿರುವ ಘಟನೆ ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಹೌದು ಇಬ್ಬರು ಕಳ್ಳರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಕಬ್ಬಿಣ ಕಳ್ಳತನಕ್ಕೆ ಹೋಗಿದ್ದಾಗ ಕಳ್ಳರ ಮೇಲೆ ಹಲ್ಲೆ ನಡೆಸಲಾಗಿದೆ ಕಟ್ಟಡದಲ್ಲಿದ್ದ ಕಬ್ಬಿಣ ಕವಿಯಲು ಹೋಗಿದ್ದ ಸಲ್ಮಾನ್ ಹಾಗೂ ಸಲೀಂ ಎಂಬ ಕಳ್ಳರು ಎಂದು ತಿಳಿದುಬಂದಿದೆ.
ಕೂಲಿ ಕಾರ್ಮಿಕರ ಹಲ್ಲೆಯಿಂದ ಸಲ್ಮಾನ್ (25) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಸಲಿಂ ಸ್ಥಿತಿ ಕೂಡ ಗಂಭೀರವಾಗಿದ್ದು ತಕ್ಷಣ ಅದನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.