ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂನ್ 18ರ ವರೆಗೆ ಎಸ್ಐಟಿ ಕಷ್ಟಡಿಗೆ ನೀಡಿ ಬೆಂಗಳೂರಿನ 42ನೇ ಎಸ್ಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೊಳೆನರಸೀಪುರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 42ನೆ ACMM ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸೈಬರ್ ಕ್ರೈಂ ಠಾಣೆ ನಂಬರ್ 02/ 2024 ರಲ್ಲಿ ಕಸ್ಟಡಿಗೆ ನೀಡಿ ಎಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.
ಹೀಗಾಗಿ ಮನವಿ ಪುರಸ್ಕರಿಸಿ ಕೋರ್ಟ್ ಬಾಡಿ ವಾರೆಂಟ್ ಜಾರಿಗೊಳಿಸಿದೆ ಈ ಹಿನ್ನೆಲೆಯಲ್ಲಿ ಜೂನ್ 18 ರವರೆಗೆ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐ ಟಿ ಕರ್ತರಿಗೆ ನೀಡಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.