ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ರಸ್ಟ್ ನಡೆದು ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ವಿಷ್ಣು ಸ್ಪೋಟಕ ವಾದಂತಹ ಹೇಳಿಕೆ ನೀಡಿದ್ದು, ರೇಣುಕಾ ಸ್ವಾಮಿ ಕರೆದುಕೊಂಡು ಬಂದು ಥಳಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಪೊಲೀಸರ ವಿಚಾರಣೆಯ ವೇಳೆ ಸ್ಪೋಟಕ ವಾದಂತ ಹೇಳಿಕೆ ನೀಡಿರುವ ಶೆಡ್ ಸೆಕ್ಯೂರಿಟಿ ಗಾರ್ಡ ವಿಷ್ಣು ರೇಣುಕಾ ಸ್ವಾಮಿಯನ್ನು ಇಲ್ಲಿಗೆ ಕರೆದುಕೊಂಡು ಥಳಿಸಿದ್ದರು. ರೇಣುಕಾಸ್ವಾಮಿ ಕರ್ಕೊಂಡು ಬಂದಾಗ ಗೇಟ್ ತೆಗೆದಿದ್ದು ನಾನೇ. ದರ್ಶನ್ ಸೇರಿ ಎಲ್ಲ ಆರೋಪಿಗಳು ಷಡ್ ಗೆ ಬಂದಿದ್ದರು. ಶೆಡ್ ನಲ್ಲಿರುವ ಕೊಠಡಿಗೆ ಕರೆದುಕೊಂಡು ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬಂದಿದ್ದರು ಎಂದು ಪಟ್ಟಣಗೆರೆ ಸೆಕ್ಯೂರಿಟಿ ಕಾರ್ಡ್ ವಿಷ್ಣು ಸ್ಪೋಟಕ ಮಾಹಿತಿ ನೀಡಿದ್ದಾನೆ.
ಇದೀಗ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ಡಿಗೆ ಎಫ್ ಎಲ್ ತಂಡ ಮತ್ತೊಮ್ಮೆ ಭೇಟಿ ನೀಡಿದ್ದು ನಿನ್ನೆ ಕೂಡ ಎಫ್ ಎಸ್ ಎಲ್ ತಂಡ ಇಲ್ಲಿ ಭೇಟಿ ನೀಡಿ ಹಲವು ಸಾಕ್ಷಿಗಳನ್ನು ಸಂಗ್ರಹಿಸಿತ್ತು. ಇದೀಗ ಟಿಟಿ ವಾಹನದಲ್ಲಿ ಎಫ್ ಎಸ್ ಎಲ್ ತಂಡದ ಅಧಿಕಾರಿಗಳು ಭೇಟಿ ನೀಡಿದ್ದು ಮತ್ತೆ ಸಾಕ್ಷಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.