ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೇಣುಕಾ ಸ್ವಾಮಿ ಕೊಲೆಯಾದ ಬಳಿಕ ಆದನಂತರ ದೇಹವನ್ನು ಶಿಫ್ಟ್ ಮಾಡಲು ನಟ ದರ್ಶನ್ ಆರೋಪಿ ಪ್ರದೋಷ್ ಗೆ 30 ಲಕ್ಷ ನೀಡಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಕೊಲೆಯ ಬಳಿಕ ಮೃತ ದೇಹ ರವಾನಿಸಲು ಪ್ರದೊಷ್ ಗೆ ದರ್ಶನ್ 30 ಲಕ್ಷ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಹಣ ಕೊಟ್ಟಿದ್ದೇ, ಕೊಲೆ ಕೇಸ್ಗೆ ಸಿಕ್ಕ ಬಿಗ್ ಎವಿಡೆನ್ಸ್ ಎಂದು ಹೇಳಲಾಗುತ್ತಿದೆ. ಈಗ ನೀವು ಅರೆಸ್ಟ್ ಆಗಿ ಬೆಲ್ ಕೊಟ್ಟು ಬಿಡಿಸಿಕೊಳ್ಳುತ್ತೇನೆ. ಕೋರ್ಟ್ ಖರ್ಚು ಬೇಲ್ ಖರ್ಚು ಎಲ್ಲಾ ನೋಡಿಕೊಳ್ಳುತ್ತೇನೆ. ನಂತರ ಹಣವನ್ನು ನೀಡುತ್ತೇವೆ ಎಂದು ನಟ ದರ್ಶನ್ ಕೂಡ ಹೇಳಿದ್ದರು ಎಂದು ಹೇಳಲಾಗುತ್ತಿದೆ.
ಈಗ ನಟ ದರ್ಶನ ಸೇರಿದಂತೆ ಎಲ್ಲಾ ಆರೋಪಿಗಳನ್ನು ಸ್ಥಳ ಮಹಾಜರಿಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಆರ್ ಆರ್ ನಗರದ ಬಳಿ ಇರುವ ಶೆಡ್ಗೆ ಹಾಗೂ ರೇಣುಕಾ ಸ್ವಾಮಿ ಶವ ಬಿಸಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ಸ್ಥಳ ಮಹಜರು ಬಹುತೇಕ ಅಂತ್ಯವಾಗಿದೆ.