ಬೆಳಗಾವಿ : ಕಳೆದ ಕೆಲವು ತಿಂಗಳಿನ ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಬಾರಿ ಸದ್ದು ಮಾಡಿತ್ತು. ಇರಲ್ಲದೆ ಇತ್ತೀಚಿಗೆ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕ ಚಿಕ್ಕೋಡಿಯಲ್ಲಿ ಪ್ರಿಯಾಂಕ ಜಾರಕಿಹೊಳಿ ಗೆಲ್ಲುತ್ತಿದ್ದಂತೆ ಪಾಕ್ ಘೋಷಣೆ ಕೂಗಲಾಗಿತ್ತು. ಇದೀಗ ಬೆಳಗಾವಿಯ ಜಿಲ್ಲಾ ಕೋರ್ಟ್ ದಲ್ಲಿ ವ್ಯಕ್ತಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲಾ ಕೋರ್ಟ್ ನಲ್ಲಿ ಮತ್ತೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಬೆಳಗಾವಿ ಜಿಲ್ಲಾ ಕೋರ್ಟ್ ನಲ್ಲಿ ಪಾಕಿಸ್ತಾನ ಪರ ಘೋಷಣೆ ಹೋಗಿದ್ದಾನೆ. ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಅಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಆರೋಪಿ ಜಯೇಶ್ ಪೂಜಾರಿಗೆಧರ್ಮದೇಟು ನೀಡಿದ್ದಾರೆ.ಕೂಡಲೆ ಆರೋಪಿ ಜಯೇಶ್ ನನ್ನು ರಕ್ಷಿಸಿ ಪೊಲೀಸರು ಆತನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಆರೋಪಿ ಜಯೇಶ್ ಪೂಜಾರಿ ಪೂಜಾರಿ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರಿಗೂ ಜೀವ ಬೆದರಿಕೆ ಮಾಡಿದ್ದ ಎನ್ನಲಾಗುತ್ತಿದ್ದು, ಹಿಂಡಲಗಾ ಜೈಲಿನಿಂದಲೇ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗುತ್ತಿದೆ