ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಆರೋಪಿಗಳಾದ ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕರೆದುಕೊಂಡು ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ನಲ್ಲಿ ಸ್ಥಳ ಮಹಜರು ನಡೆಸುತ್ತಾರೆ ಎಂದು ತಿಳಿದುಬಂದಿದೆ.
ಹೌದು ಇಂದು ನಟ ದರ್ಶನ್ ಅವರನ್ನು ಪೊಲೀಸರು ಕರೆದೋಯ್ದು ಸ್ಥಳ ಮಹಜರು ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ನಿನ್ನೆ ಪೊಲೀಸರು ಆರೋಪಿಗಳಿಂದ ಹೇಳಿಕೆಯನ್ನ ಪಡೆದಿದ್ದರು. ಇಂದು ಕೃತ್ಯ ಎಸಗಿರುವ ಸ್ಥಳದಲ್ಲಿ ಅವರನ್ನು ಕರೆದುಕೊಂಡು ಹೋಗಿ ಮಹಜರು ನಡೆಸಲಾಗುತ್ತದೆ.
ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ನಲ್ಲಿ ಸ್ಥಳ ಮಹಜರು ನಡೆಸಲಾಗುತ್ತದೆ. ಕೊಲೆ ಕೇಸ್ ಸಂಬಂಧ ನಿನ್ನೆ ಎಫ್ ಎಸ್ ಎಲ್ ತಂಡ ಮತ್ತು ಸೋಕೋ ಟೀಮ್ ನಿಂದ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ದರ್ಶನ್ ಪವಿತ್ರ ಗೌಡ ಸೇರಿ ಆರೋಪಿಗಳಿಂದ ಸ್ಥಳ ಮಹಜರು ನಡೆಸಲಾಗುತ್ತದೆ. ಅತಿಯಾದ ರೇಣುಕಾ ಸ್ವಾಮಿಯನ್ನು ಎಲ್ಲಿ ಕೊಲೆ ಮಾಡಿದರು ಯಾವ ವಸ್ತುಗಳಿಂದ ಹತ್ಯೆ ಮಾಡಿದ ಎಂಬುದರ ಕುರಿತು ಪೊಲೀಸರು ಇದೀಗ ಸ್ಥಳ ಮಹಜರು ನಡೆಸಲಿದ್ದಾರೆ.