ಬೆಂಗಳೂರು : ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 13 ಆರೋಪಿಗಳು ಹೀಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನೆನ್ನೆ ಬೆಂಗಳೂರಿನ ಮೇಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.
ಈ ವೇಳೆ ಕೋರ್ಟ್ ನಿಂದ ಅನ್ನಪೂರ್ಣೇಶ್ವರಿ ಠಾಣೆಗೆ ಕರೆ ತಂದ ಪೊಲೀಸ್ ಸಿಬ್ಬಂದಿ ಅವರಿಗೆ ದೊನ್ನೆ ಬಿರಿಯಾನಿ, ತಿಂಡಿ ಕಾಫಿ ನೀಡಿ ರಾಜ್ಯಾತಿಥ್ಯ ನೀಡಿದ್ದಾರೆ.ಹೌದು ರೇಣುಕಾ ಸ್ವಾಮಿ ಎಂಬುವವರನ್ನು ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಿದ ಆರೋಪದಲ್ಲಿ ಪವಿತ್ರಾ ಗೌಡ, ದರ್ಶನ್, ವಿ. ವಿನಯ್, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಆರ್. ನಾಗರಾಜು, ಕೆ. ಪವನ್ ಮುಂತಾದವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಿನ್ನೆ ರಾತ್ರಿ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ಬಾಕ್ಸ್ಗಳನ್ನು ತರಿಸಲಾಗಿದೆ.
ಆದರೆ ರಾತ್ರಿ ಕೂಡ ಊಟ ಮಾಡದ ನಟ ದರ್ಶನ್ ಹಾಗೂ ಸಹಚರರು ರಾತ್ರಿ ಊಟ ಬೇಡ ಮಜ್ಜಿಗೆ ಕೊಡಿ ಎಂದು ಹೇಳಿದ್ದರು. ಬೆಳಿಗ್ಗೆ ದರ್ಶನ್ ಮತ್ತು ಸಹಚರರಿಗೆ ಪೊಲೀಸರು ತಿಂಡಿ ನೀಡಿದ್ದಾರೆ ತಿಂಡಿಗೆ ರೈಸ್ ಬಾತ್ ಮತ್ತು ಇಡ್ಲಿ ನೀಡಿದ್ದಾರೆ ತಿಂಡಿ ಬೇಡ ಕಾಫಿ, ಟೀ ಮತ್ತು ಬಿಸ್ಕೆಟ್ ಸಾಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ ಎಲ್ಲರಿಗೂ ಒಂದೇ ಊಟ ಕೊಡುತ್ತೇವೆ. ಇಲ್ಲಿ ಕೊಟ್ಟ ಊಟವನ್ನೇ ಸೇವಿಸಬೇಕು ಎಂದು ಪೊಲೀಸ ಅಧಿಕಾರಿಗಳು ಅವರಿಗೆ ತಿಳಿಸಿದ್ದಾರೆ.