ಬೆಂಗಳೂರು: ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬೆನ್ನಲ್ಲೇ ಶೆಡ್ ಬಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಂತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ನಟ ದರ್ಶನ್ ಸ್ನೇಹಿತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಂತ ಕಾರಣಕ್ಕಾಗೇ ಚಿತ್ರದುರ್ಗಿ ಮೂಲದ ರೇಣುಕಾಸ್ವಾಮಿ ಎಂಬಾತನನ್ನು ವಿನಯ್ ಎನ್ನುವವರಿಗೆ ಸೇರಿದ ಶೆಡ್ ಗೆ ಕರೆದೊಯ್ಯಲಾಗಿತ್ತು. ಕಿಡ್ನ್ಯಾಪ್ ಮಾಡಿ, ಅಲ್ಲಿ ಹಲ್ಲೆ ಕೂಡ ಮಾಡಲಾಗಿತ್ತು. ಈ ಹಲ್ಲೆಯ ವೇಳೆಯಲ್ಲಿ ಬಲವಾದ ರಾಡ್ ನಿಂದ ಹೊಡೆದ ಕಾರಣ, ರೇಣುಕಾಸ್ವಾಮಿ ಸಾವನ್ನಪ್ಪಿದ್ದರು.
ಈ ಇಡೀ ಘಟನೆ ಬಂಧಿತ ಆರೋಪಿ ವಿನಯ್ ಎಂಬುವರಿಗೆ ಸೇರಿದಂತ ಶೆಡ್ ನಲ್ಲಿ ನಡೆದಿತ್ತು. ಈ ಹಿನ್ನಲೆಯಲ್ಲಿ ಶೆಡ್ ಬಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಂತ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಬಳಿಕ ಕಾಮಾಕ್ಷಿ ಪೊಲೀಸ್ ಠಾಣೆಗೆ ಕರೆದೊಯ್ಯೋ ಸಾಧ್ಯತೆ ಇದೆ.
ಶಿವಮೊಗ್ಗ: ಜೂ.13ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
‘ಮಾತು ಬರುತ್ತಿಲ್ಲ, ದರ್ಶನ್ಗಾಗಿ ಪ್ರಾರ್ಥಿಸುತ್ತೇನೆ’:ಆಘಾತ ಹೊರಹಾಕಿದ ನಟಿ ಸಂಜನಾ ಗಲ್ರಾನಿ | Darshan Arrest