ಬೆಂಗಳೂರು : ಲೋಕಸಭೆ ಚುನಾವಣೆ ಫಲಿತಾಂಶ ಹಿಂದೂ ಪ್ರಕಟವಾಗಿದ್ದು ಕಳೆದ ಎರಡು ದಿನಗಳ ಹಿಂದೆ ಮತದಾನೋ ತರ ಸಮೀಕ್ಷೆಗಳು ಬಹಿರಂಗ ಪಡಿಸಿದ್ದ ಅಂಕಿ ಅಂಶಗಳು ಇದೀಗ ಸಂಪೂರ್ಣ ತಲೆಕೆಳಗಾಗಿವೆ ಎನ್‌ಡಿಎ ಮತ್ತು ಐಎನ್‌ಡಿಐಎ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಇದೀಗ ಚುನಾವಣೆ ಫಲಿತಾಂಶದ ಕುರಿತು ಹಿರಿಯ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಕಾಶ್ ರೈ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ. ಅವನು ಈಗ ಬೇರೊಬ್ಬರ ಬೆಂಬಲದ ಸಹಾಯ ಪಡೆದುಕೊಳ್ಳುವಂತಾಗಿದೆ. ಭಾರತ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ಅಹಂಕಾರವನ್ನು ಪಂಕ್ಚರ್ ಮಾಡಿ, ಅವರ ಸ್ಥಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಉತ್ತಮ ರೀತಿಯಲ್ಲಿ ಹೋರಾಡಿದ್ದು, ಇದು ಮುಂದುವರಿಯುತ್ತದೆ ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ 17 ಸ್ಥಾನ ಬಿಜೆಪಿ 9 ಸ್ಥಾನ ಕಾಂಗ್ರೆಸ್ ಹಾಗೂ 2 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಒಂದು ಚುನಾವಣೆ ಫಲಿತಾಂಶ ಕುರಿತಂತೆ ಪ್ರಕಾಶ್ ರಾಜ್ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
The EMPEROR IS NAKED… he is forced to walk with someone else’s support now … 😂😂😂. … Thank you INDIA and the responsible Civil Society … for puncturing his Ego and for showing his place.. We fought well for our Country … and We shall continue to…💪💪💪 #JaiHind… https://t.co/RnRzxl7oti
— Prakash Raj (@prakashraaj) June 4, 2024