ಬೀದರ್ : ತಂದೆಯ ಗರಡಿಯಲ್ಲಿಯೇ ಬೆಳೆದು ಇದೀಗ ಕೇವಲ 26 ನೇ ವಯಸ್ಸಿಗೆ ಸಂಸತ್ತು ಪ್ರವೇಶಿಸಿರುವ ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಾಗೂ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಕಂಡ್ರೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಹೌದು ಸಚಿವ ಈಶ್ವರ್ ಖಂಡ್ರೆ ಪುತ್ರ, ಸಾಗರ ಖಂಡ್ರೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಕ್ಷೇತ್ರವನ್ನು ಮರಳಿ “ಕೈ” ವಶವಾಗಿದೆ. ಸಾಗರ ಖಂಡ್ರೆ ಗೆಲವು ಸುಲಭವಾದದ್ದು ಅಲ್ಲ. ಸಾಗರ ಖಂಡ್ರೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಘಟಾನುಘಟಿ ನಾಯಕ ಕೇಂದ್ರ ಸಚಿವ ಭಗವಂತ ಖೂಬಾ ಸೋಲುಂಡಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಸಾಗರ್ ಖಂಡ್ರೆ ವಿರುದ್ಧ ಸಾಗರ ಖಂಡ್ರೆ ಒಬ್ಬ ಅನುಭವ ಇಲ್ಲದ ಹುಡುಗ, ಆತ ಗೆದ್ದರೆ ಸಂಸತ್‌ಗೆ ಸ್ಕೂಲ್ ಬ್ಯಾಗ್, ಬುಕ್ ಹಿಡಿದು ಕರೆದುಕೊಂಡು ಹೋಗಲು ಒಬ್ಬರು ಬೇಕು ಎಂದು ವ್ಯಂಗ್ಯ ವಾಡಿದ್ದರು. ಆದರೆ ಸಾಗರ ಖಂಡ್ರೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಾನೊಬ್ಬ ತಾನು ಎಷ್ಟು ಪ್ರಭುದ್ದನಾಗಿದ್ದೇನೆ ಎಂದು ಅಶೋಕ್ ಗೆ ತಿರುಗೇಟು ನೀಡಿದ್ದಾರೆ.