ಬೆಂಗಳೂರು: ಮೂರು ದಿನಗಳ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಿಸಿರುವಂತ ಸಾಮಾನ್ಯ ಪ್ರವೇಶ ಪರೀಕ್ಷೆ-2024ರಲ್ಲಿ ಮತ್ತೊಂದು ಎಡವಟ್ಟನ್ನು ಮಾಡಲಾಗಿದೆ. ಈ ಕಾರಣದಿಂದಾಗಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಂತಕಕ್ಕೆ ಒಳಗಾವಂತೆ ಕೆಇಎ ಮಾಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಶನಿವಾರ ಸಂಜೆಯಂದ ಸಾಮಾನ್ಯ ಪ್ರವೇಶ ಪರೀಕ್ಷೆ(KCET-2024)ರ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೆಲವರು ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಎಂಬುದಾಗಿ ಎಡವಟ್ಟು ಮಾಡಿದ್ರೇ, ಮತ್ತೆ ಕೆಲವ್ದಯಾರ್ಥಿಗಳ Rankಗೆ ತಡೆಯಾಗಿದ್ದು, ನೂರಾರು ಸಂಖ್ಯೆ ವಿದ್ಯಾರ್ಥಿಗಳು, ಪೋಷಕರು ಮಲ್ಲೇಶ್ವರಂ ಕೆಇಎ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ್ದಾರೆ.
ಈಗಾಗಲೇ ಕೆಇಎಯಿಂದ ಸಿಇಟಿ ಪರೀಕ್ಷೆಯಲ್ಲಿ ಪಠ್ಯದಲ್ಲಿ ಇಲ್ಲದ ವಿಷಯಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳುವ ಮೂಲಕ ಎಡವಟ್ಟು ಮಾಡಲಾಗಿತ್ತು. ಬಳಿಕ ತಪ್ಪು ಸರಿಪಡಿಸಿಕೊಂಡು ಗ್ರೇಸ್ ಅಂಕ ಕೂಡ ನೀಡಲಾಗಿತ್ತು. ಈಗ ಕೆಲವರಿಗೆ ಪರೀಕ್ಷೆ ಹಾಜರಾಗಿದ್ರು ಕೂಡ ಗೈರಾಗಿದ್ದಾರೆಂದು ರಿಸಲ್ಟ್ ಬಂದಿದೆ. ಕೆಲ ವಿಧ್ಯಾರ್ಥಿಗಳ ಸಿಇಟಿ ರ್ಯಾಕಿಂಗ್ ಗೆ ತಡೆಯಾಗಿದ್ದು, ನೂರಾರು ಸಂಖ್ಯೆಯಲ್ಲಿ ಮಲೇಶ್ವರಂ ಕೆಇಎ ಕಛೇರಿ ಮುಂಭಾಗದಲ್ಲಿ ಪೋಷಕರು, ವಿಧ್ಯಾರ್ಥಿಗಳು ಜಮಾಯಿಸಿದ್ದಾರೆ. ನಮ್ಮ ಮಕ್ಕಳು ಉತ್ತಮ ಅಂಕ ಪಡೆದ್ರು ರ್ಯಾಕಿಂಗ್ ಇಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವಂತ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು, ವಿದ್ಯಾರ್ಥಿಗಳಿಗೆ ಪಿಯು ಬೋರ್ಡ್ ನಿಂದ ನೀಡಲಾಗಿದ್ದಂತ ಯೂನಿಕ್ ನಂಬರ್ ತಪ್ಪಾಗಿ ದಾಖಲಿಸಲಾಗಿದೆ. ಈ ಕಾರಣಕ್ಕೆ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈಗ ಸಮಸ್ಯೆ ಆಗಿದೆ. ಇದನ್ನು ಸರಿ ಸರಿಪಡಿಸೋ ಕೆಲಸ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ತಂಡ ಕೂಡ ರಚನೆ ಮಾಡಲಾಗಿದ್ದು, ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಸಿ, Rank ಪ್ರಕಟಿಸೋದಾಗಿ ತಿಳಿಸಿದ್ದಾರೆ.
ಕಾರ್ಮಿಕರೇ ಗಮನಿಸಿ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ʻಸೌಲಭ್ಯʼಗಳು!
ʻಪ್ರಧಾನಿ ಮೋದಿ ಮತ್ತೆ ಗೆದ್ದರೆ….ʼ : ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಕಣ್ಣಿಟ್ಟ ಚೀನಾ!