ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ಈಗಾಗಲೇ ಪತ್ರಕರ್ತರ ಅನೇಕ ಸಂಘಗಳಿದ್ದಾವೆ. ಇದರ ನಡುವೆ ಈಗ ಹೊಸ ಪತ್ರಕರ್ತರ ಸಂಘವೊಂದು ಆರಂಭಗೊಂಡಿದೆ. ಅದೇ ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್(ರಿ) ಸಾಗರ ಎಂಬುದಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿಗಾಗಿ ಹೊಸದೊಂದು ಸಂಘ ಆರಂಭಗೊಂಡಿದೆ. ಶಶಿಕಾಂತ್ ಎಂ.ಎಸ್ ಅವರ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್ (ರಿ) ಸಾಗರ ಎನ್ನುವಂತ ಹೊಸ ಸಂಘ ಶುರುವಾಗಿದೆ.
ಈ ಸಂಘದಲ್ಲಿ ಉಪಾಧ್ಯಕ್ಷರಾಗಿ ಸುಭಾಷ್ ಚಂದ್ರ.ಡಿ, ವಸಂತ ಬಿ ಈಶ್ವರಗೆರೆ ಇದ್ದರೇ, ಪ್ರಧಾನ ಕಾರ್ಯದರ್ಶಿಯಾಗಿ ಷಣ್ಮುಖ.ಎಂ.ಸಿ, ಖಜಾಂಚಿಯಾಗಿ ಪ್ರಭಾಕರ.ಸಿ, ಸಹ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್.ಡಿ, ನಿರ್ದೇಶಕರಾಗಿ ಫ್ರಾಂಕಿ ಲೋಬೋ, ಪಿ.ಗೋಪಾಲಕೃಷ್ಣ, ಮನ್ಸೂರ್ ಅಹಮ್ಮದ್ ಜೊತೆಯಾಗಿದ್ದಾರೆ.
ರಾಜ್ಯದ ನೋಂದಣಿ ಅಧಿನಿಮಯಗಳ ಅನುಸಾರ ಪ್ರೆಸ್ ಕ್ಲಬ್ ಅಸೋಸಿಯೇಷನ್ ಟ್ರಸ್ಟ್(ರಿ) ಸಾಗರ ಎನ್ನುವಂತ ಸಂಘವು ನೋಂದಣಿಗೊಂಡಿದೆ.
ಇದು ‘ಎಕ್ಸಿಟ್ ಪೋಲ್’ ಅಲ್ಲ, ‘ಮೋದಿ ಮಾಧ್ಯಮ ಸಮೀಕ್ಷೆ’: ಕಾಂಗ್ರೆಸ್ ನಾಯಕ ‘ರಾಹುಲ್ ಗಾಂಧಿ’ ವ್ಯಂಗ್ಯ