ದಾವಣಗೆರೆ: ಕೆಆರ್ ಐಡಿಎಲ್ ಗುತ್ತಿಗೆದಾರನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆದೇಶಿಸಿದ್ದಾರೆ.
ಈ ಬಗ್ಗೆ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರ್ ಡಿಪಿಆರ್) ಅಂಜುಮ್ ಪರ್ವೇಜ್ ಅವರಿಗೆ ಸಚಿವರು ಸೂಚಿಸಿದ್ದಾರೆ.
ಹಿರಿಯ ಅಧಿಕಾರಿಗಳ ಸಮಿತಿ ರಚಿಸುವಂತೆ ಎಸಿಎಸ್ ಆರ್ ಡಿಪಿಆರ್ ಗೆ ಸೂಚನೆ ನೀಡಿದ್ದೇನೆ.
ಈ ಆರೋಪಗಳ ಬಗ್ಗೆ ತನಿಖೆ ನಡೆಸಿ ಕೆಆರ್ ಐಡಿಎಲ್ ವರದಿ ಸಲ್ಲಿಸಬೇಕು’ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಕೆಆರ್ ಐಡಿಎಲ್ ಎಂಜಿನಿಯರಿಂಗ್ ನಿಗಮವಾಗಿದ್ದು, ಉಪ ಗುತ್ತಿಗೆಗೆ ಪ್ರೋತ್ಸಾಹವಿಲ್ಲ.
ದಾವಣಗೆರೆ ಮೂಲದ ಗುತ್ತಿಗೆದಾರ ಪಿ.ಎಸ್.ಗೌಡರ್ (48) ಕೌಟುಂಬಿಕ ಆಸ್ತಿ ವಿವಾದ ಮತ್ತು ಕೆಆರ್ ಐಡಿಎಲ್ ಮೂಲಕ ನಿರ್ವಹಿಸಿದ ಕಾಮಗಾರಿಗಳ ಬಿಲ್ ಪಾವತಿಸದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ