ಬಾಗಲಕೋಟೆ: ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ. ಈ ದಾಳಿಯಲ್ಲಿ ಮಹಿಳೆ ಹಾಗೂ ಅವರ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿಯಲ್ಲಿ ಮನೆಯ ಬಾಗಿಲು ತೆಗೆಯಲಿಲ್ಲ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ದಾಳಿ ಎರಚಿರೋ ಘಟನೆ ನಡೆದಿದೆ.
ವಿಜಯಪುರ ಮೂಲದ ಲಕ್ಷ್ಮೀ ಹಾಗೂ ಮೌನೇಶ್ ಗೆ ಮದುವೆಯಾಗಿದ್ದರೂ ಪರಸ್ಪರ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ರೀತಿಯಲ್ಲಿ ವಾಸವಿದ್ರು.
ಹೀಗೆ ಇದ್ದಂತ ಮೌನೇಶ್ ಗೆ ಲಕ್ಷ್ಮೀ ಬಡಿಗೇರ ಮೇಲೆ ಸಂಶಯ ಇತ್ತಂತೆ. ಇದೇ ಕಾರಣಕ್ಕಾಗಿ ಆಗಾಗ ಜಗಳ ಕೂಡ ಆಗುತ್ತಿತ್ತಂತೆ. ಒಂದು ವಾರದಿಂದ ಮೌನೇಶ್ ಮನೆ ಬಿಟ್ಟು ಹೋಗಿದ್ದನಂತೆ. ಮೌನೇಶ್ ನಂಬರ್ ಕೂಡ ಲಕ್ಷ್ಮೀ ಬ್ಲಾಕ್ ಮಾಡಿದ್ದಳಂತೆ. ಆದ್ರೇ ನಿನ್ನೆ ರಾತ್ರಿ ಮನೆಗೆ ವಾಪಾಸ್ಸು ಮೌನೇಶ್ ಬಂದಿದ್ದಾನೆ. ಈ ವೇಳೆ ಲಕ್ಷ್ಮೀ ಮನೆಯ ಬಾಗಿಲು ತೆಗೆಯೋದಕ್ಕೆ ನಿರಾಕರಿಸಿದ್ದಾರೆ.
ಇಷ್ಟರಿಂದಲೇ ಕುಪಿತಗೊಂಡಂತ ಮೌನೇಶ್ ಅದೆಲ್ಲಿಂದಲೋ ಆ್ಯಸಿಡ್ ಖರೀದಿಸಿ ತಂದು, ಅದಕ್ಕೆ ನೀರು ಮಿಶ್ರಣ ಮಾಡಿ ಲಕ್ಷ್ಮೀ ಹಾಗೂ ಅವರ 8 ವರ್ಷದ ಪುತ್ರಿಯ ಮೇಲೆ ಕಿಟಕಿಯಿಂದಲೇ ಎರಚಿದ್ದಾನೆ. ಇದರಿಂದ ಲಕ್ಷ್ಮೀ ಎಡಗಣ್ಣು, ಮುಖಕ್ಕೆ ಗಾಯವಾಗಿದೆ. ಪುತ್ರಿಗೆ ಕೂಡ ಅಲ್ಪಸ್ವಲ್ಪ ಗಾಯವಾಗಿದೆ. ಕೂಡಲೇ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ‘ಬಿಭವ್ ಕುಮಾರ್’ಗೆ 3 ದಿನ ಪೊಲೀಸ್ ಕಸ್ಟಡಿಗೆ
BREAKING: ‘ಪ್ರಜ್ವಲ್ ರೇವಣ್ಣ’ ಅಶ್ಲೀಲ ವೀಡಿಯೋ ಕೇಸ್: ಏಕಕಾಲಕ್ಕೆ ಹಾಸನ ಜಿಲ್ಲೆಯ 3 ಕಡೆ ‘SIT ದಾಳಿ’