ಚಿತ್ರದುರ್ಗ: ಮುರುಘಾ ಶ್ರೀ 1 ಫೋಕ್ಸೋ ಕೇಸ್ ಗೆ ಮತ್ತೊಂದು ತಿರುವು ಪಡೆದಿದೆ. ಸಂತ್ರಸ್ತ ಬಾಲಕಿ ಮೇಲೆ ಒತ್ತಡ ಹಾಕ್ತಿದ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲೇ ಒಂದನೇ ಫೋಕ್ಸ್ ಕೇಸ್ ನ ಸಂತ್ರಸ್ತ ಬಾಲಕಿ ಚಿಕ್ಕಪ್ಪ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದಾಳೆ.
ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧದ ಒಂದನೇ ಪೋಕ್ಸೋ ಕೇಸ್ ಸಂಬಂಧದ ಸಂತ್ರಸ್ತ ಬಾಲಕಿ ಚಿಕ್ಕಪ್ಪನ ಮನೆಯಿಂದ ನಾಪತ್ತೆಯಾಗಿದ್ದಂತ ಆರೋಪ ಕೇಳಿ ಬಂದಿತ್ತು. ಆದ್ರೇ ಮನೆಯಲ್ಲಿನ ಕಿರುಕುಳ ತಾಳಲಾರದೇ, ಸಂತ್ರಸ್ತ ಬಾಲಕಿ ಮೈಸೂರಿನ ಒಡನಾಡಿ ಸಂಸ್ಥೆಗೆ ತೆರಳಿರೋದಾಗಿ ತಿಳಿದು ಬಂದಿದೆ.
ಆದ್ರೇ ಮೇ.22ರಂದು ಚಿತ್ರದುರ್ಗದಲ್ಲಿ ಬಾಲಕಿಯ ಚಿಕ್ಕಪ್ಪ ಮನೆಯಿಂದ ಸಂತ್ರಸ್ತೆ ನಾಪತ್ತೆಯಾಗಿರೋದಾಗಿ ದೂರು ನೀಡಿದ್ದರು. ಹೀಗಾಗಿ ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಕೇಸ್ ಗೆ ಮತ್ತೊಂದು ತಿರುವು ಎನ್ನಲಾಗಿತ್ತು.
ಆದ್ರೇ ಇಂದು ಮೈಸೂರಿನ ಒಡನಾಡಿ ಸಂಸ್ಥೆಗೆ ಸಂತ್ರಸ್ತ ಬಾಲಕಿ ತೆರಳಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಮನೆಯಲ್ಲಿ ದೈಹಿಕ & ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಹೇಳಿದ್ದಾಳೆ.
ಒಡನಾಡಿ ಸಂಸ್ಥೆಯ ಜೊತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮುಂದೆ ಬಂದ ಸಂತ್ರಸ್ತ ಬಾಲಕಿ, ನನ್ನ & ನನ್ನ ತಮ್ಮನ ಮೇಲೆ ಮನೆಯಲ್ಲಿ ದೈಹಿಕ & ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ & ನನ್ನ ತಮ್ಮನ ರಕ್ಷಣೆ ಮಾಡಿ ಎಂದು CWC ಮುಂದೆ ಬಾಲಕಿ ಮನವಿ ಮಾಡಿದ್ದಾಳೆ.
ಒಡನಾಡಿ ಸಂಸ್ಥೆಯ ಸ್ಟಾನ್ಲಿ ಜೊತೆ ಆಗಮಿಸಿದ್ದ ಸಂತ್ರಸ್ತ ಬಾಲಕಿ, ಚಿತ್ರದುರ್ಗದ ಬಾಲಕಿಯರ ಬಾಲ ಭವನದಲ್ಲಿ ಸಂತ್ರಸ್ತ ಬಾಲಕಿಯ ಆಪ್ತ ಸಮಾಲೋಚನೆ ಕೂಡ ನಡೆಸಲಾಗಿದೆ. ಈ ಕುರಿತು ಅಧಿಕೃತವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ : ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆ
BREAKING : ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದ ಪುಂಡರು : ಮೂವರ ಬಂಧನ