ಚಿಕ್ಕಮಗಳೂರು : ಕಳೆದ ಹಲವು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಜು ದುರಂತಗಳು ಸಂಭವಿಸಿದ್ದು, ಪರಿಣಾಮ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ನಗರದ ಹೊರವಲಯದ ಕೋಟೆ ಕೆರೆಯಲ್ಲಿ ನಡೆದಿದೆ.
ಹೌದು ಮೃತ ಬಾಲಕನನ್ನು ಶಶಾಂಕ್ (13) ಎಂದು ಹೇಳಲಾಗುತ್ತಿದ್ದು, ಶಾಲೆಗೆ ರಜೆ ಇದ್ದ ಕಾರಣ ತನ್ನ ಮೂವರು ಸ್ನೇಹಿತರ ಜೊತೆ ಕೋಟೆ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದರು. ಕೆರೆಯಲ್ಲಿ ಊಳು ತುಂಬಿದ್ದ ಕಾರಣ ಬಾಲಕ ಶಶಾಂಕ್ ನ ಕಾಲು ಊಳಿನಲ್ಲಿ ಸಿಕ್ಕಿಕೊಂಡು ಬಾಲಕ ಮೇಲೆ ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ.
ಮೃತ ಶಾಶಂಕ್ ತಾಯಿ ಸ್ಕೂಲ್ ಟೀಚರ್ ಆಗಿದ್ದಾರೆ.ಆದರೆ ಬಾಲಕ ಶಶಾಂಕ್ ಜೊತೆ ಹೋಗಿದ್ದ ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಮೃತ ದೇಹವನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.