ಬೆಂಗಳೂರು : ಮೈಸೂರಿನ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣಗೂ ಕೂಡ ಬಂಧನದ ಭೀತಿ ಎದುರಾಗಿದ್ದರಿಂದ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಮೈಸೂರಿನ ಕೆ ಆರ್ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಿಂದ ನಿರೀಕ್ಷಣ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿಸಲಾಯಿತು. ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ನೋಟಿಸ್ ನೀಡಲಾಗಿದೆ.ಯಾವ ನಿಯಮದರಿ ನೋಟಿಸ್ ನೀಡಿದ್ದಾರೆ ಎಂದು ಎಸ್ಐಟಿ ತಿಳಿಸಿಲ್ಲ.
ಹೀಗಾಗಿ ಭವಾನಿ ರೇವಣ್ಣಗೂ ಬಂಧನದ ಭೀತಿ ಇರುವುದರಿಂದ ಭವಾನಿ ರೇವಣ್ಣ ಪರ ವಕೀಲರು ಮದನ್ ತರ ನಿರೀಕ್ಷಣ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆದೆ. ಆದ್ದರಿಂದ ಆಕ್ಷೇಪಣೆ ಸಲ್ಲಿಸುವಂತೆ ಎಸ್ಐಟಿ ಪೊಲೀಸರಿಗೆ ಇದೀಗ ಕೋರ್ಟ್ ನೋಟಿಸ್ ನೀಡಿದೆ. ಭವಾನಿ ನಿರೀಕ್ಷಣ ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಿದೆ.