ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಇದ್ದು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಇದೀಗ ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡಿದ ಕ್ಷಣ ಎಸ್ ಐ ಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.
ವಿಡಿಯೋ ಬಿಟ್ಟಿದ್ದು ಎಲ್ಲಿಂದ ಯಾವ ದೇಶದಿಂದ ಈ ಕುರಿತು ಎಸ್ಐಟಿಯಿಂದ ಪರಿಶೀಲನೆ ಶುರು ಮಾಡಿದೆ.ಪ್ರಜ್ವಲ್ ರೇವಣ್ಣ ವಿಡಿಯೋ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್ ಗೆ ಮುಂದಾದ ಎಸ್ಐಟಿ, ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಹಾಸನ ಸಂಸದ ಪ್ರಜ್ವಲ್ ವಿರುದ್ಧ ಹರೆಸ್ಟ್ ವಾರಂಟ್ ಕೂಡ ಇದೆ ಒಂದು ತಿಂಗಳಿನಿಂದ ಏರ್ಪೋರ್ಟ್ ನಲ್ಲಿ ಎಸ್ಐಟಿ ಠಿಕಾಣಿ ಹೂಡಿದ್ದಾರೆ. ಯಾವ ವಿಮಾನದಲ್ಲಿ ಬರುತ್ತಾನೆ ಎಂದು ಮಾಹಿತಿ ಪಡೆಯುವ ಎಸ್ ಐ ಟಿ ಅದಕ್ಕೂ ಮುಂಚೆ ಪ್ರಜ್ವಲ್ ನನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.
ವಶಕ್ಕೆ ಪಡೆದು ಇಮಿಗ್ರೇಶನ್ ಅಧಿಕಾರಿಗಳು ಎಸ್ಐಟಿಗೆ ಒಪ್ಪಿಸಲಿದ್ದಾರೆ.ಅದಾದ ಬಳಿಕ ಎಸ್ಐಟಿಯಿಂದ ಪ್ರಜ್ವಲ್ ರೇವಣ್ಣ ಅವರ ಮೆಡಿಕಲ್ ಚೆಕಪ್ ನಡೆಯಲಿದೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.ಪ್ರಜ್ವಲ್ ರೇವಣ್ಣ ಮೊಬೈಲ್ ಅನ್ನು ಸೀಜ್ ಮಾಡಲಿದ್ದಾರೆ. ಈಗಾಗಲೇ ಪ್ರಜ್ವಲ್ ವಿರುದ್ಧ ಸಂತ್ರಸ್ತಯಿ ಇಂದ 164 ಅಡಿ ಹೇಳಿಕೆ ದಾಖಲೆ ಮಾಡಲಾಗಿದೆ.
Prajwal Revanna alleged that Congress leader Rahul Gandhi and other senior leaders spoke about his sex abuse videos which made him go into depression & Isolation. Says it was a political conspiracy. Will appear before SIT on May 31,#PrajwalRevanna. pic.twitter.com/trByiHyE00
— Mohammed Zubair (@zoo_bear) May 27, 2024