Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಬಾಬ್ ಮತ್ತು ಶವರ್ಮಾ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುತ್ತಿರುವುದು

ನಾನ್‌ ವೆಜ್‌ ಪ್ರಿಯರಿಗೆ ಬಿಗ್‌ ಶಾಕ್ : ರಾಜ್ಯದಲ್ಲಿ ಶವರ್ಮಾ ಮತ್ತು ಕಬಾಬ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಪತ್ತೆ

BIG BREAKING: ಭಾರತದಾದ್ಯಂತ ‘ವೆಬ್ ವಾಟ್ಸ್ ಅಪ್’ ಸೇವೆ ಡೌನ್: ಬಳಕೆದಾರರು ಪರದಾಟ | WhatsApp Down

ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಕಾರು ಅಪಘಾತ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕೋವಿಡ್‌ ಹಗರಣದ ತನಿಖಾ ಆಯೋಗ ಅವಧಿ ಮತ್ತೆ 3 ತಿಂಗಳು ವಿಸ್ತರಣೆ : ರಾಜ್ಯ ಸರ್ಕಾರ ಆದೇಶ
KARNATAKA

BIG NEWS : ಕೋವಿಡ್‌ ಹಗರಣದ ತನಿಖಾ ಆಯೋಗ ಅವಧಿ ಮತ್ತೆ 3 ತಿಂಗಳು ವಿಸ್ತರಣೆ : ರಾಜ್ಯ ಸರ್ಕಾರ ಆದೇಶ

By kannadanewsnow57

ಬೆಂಗಳೂರು : ರಾಜ್ಯ ಸರ್ಕಾರವು ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ವಿಚಾರಣಾ ಆಯೋಗ ರಚನೆ ಮಾಡಿದ್ದು, ವಿಚಾರಣಾ ಆಯೋಗದ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.

1. ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ಹಾಗೂ ಈ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಔಷಧಿ, ಉಪಕರಣಗಳು ಹಾಗೂ ಸಾಮಗ್ರಿಗಳ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಹಾಗೂ ಇತ್ಯಾದಿ ವಿಷಯಗಳ ಕುರಿತು 2021ರ ಜುಲೈ- ಆಗಸ್ಟ್ ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆಯನ್ನು ನಡೆಸಲು Commission of Inquiry Act 1952 ರ ನಿಯಮ 3 ಉಪನಿಯಮ 1 ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಾನ್ ಮೈಕಲ್ ಕುನ್ಹಾ ಇವರ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸಿ 03 ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ದಿನಾಂಕ: 25.08.2023ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ ಹಾಗೂ ದಿನಾಂಕ:07.10.2023ರ ಅಧಿಸೂಚನೆಯಲ್ಲಿ ಸದರಿ ವಿಚಾರಣಾ ಆಯೋಗಕ್ಕೆ (Terms of References) ಅಂಶಗಳನ್ನು ನಿಗದಿಪಡಿಸಲಾಗಿರುತ್ತದೆ.

2. ತದನಂತರ ದಿನಾಂಕ: 22.11.2023ರ ಅಧಿಸೂಚನೆಯಲ್ಲಿ ವಿಚಾರಣಾ ಆಯೋಗದ ಅವಧಿಯನ್ನು ದಿನಾಂಕ: 24.05.2024ರವರೆಗೆ ವಿಸ್ತರಿಸಲಾಗಿತ್ತು.

3. ಕೋವಿಡ್-19ರ ವಿಚಾರಣಾ ಆಯುಕ್ತರು, ನ್ಯಾಯಮೂರ್ತಿ ಶ್ರೀ ಜಾನ್ ಮೈಕಲ್ ಕುನ್ನ, ನಿವೃತ್ತ ನ್ಯಾಯಾಧೀಶರು, ಘನವೆತ್ತ ಉಚ್ಚ ನ್ಯಾಯಾಲಯ, ಕರ್ನಾಟಕ ಇವರ ಪತ್ರ ಸಂಖ್ಯೆ: ಆ.ಇ/ಕೋವಿಡ್-19/ವಿಚಾರಣಾ ಆಯೋಗ/70/2023-24, ದಿನಾಂಕ: 10.04.2024ರ ಮನವಿಯಲ್ಲಿ, ಸದರಿ ವಿಚಾರಣಾ ಆಯೋಗದ ಅವಧಿಯು ದಿನಾಂಕ:24.05.2024ಕ್ಕೆ ಕೊನೆಗೊಳ್ಳಲಿರುವುದರಿಂದ, ದಿನಾಂಕ:25.05.2024 ರಿಂದ 31.08.2024 ರವರೆಗೆ ವಿಚಾರಣಾ ಆಯೋಗವನ್ನು ವಿಸ್ತರಿಸಲು ಕೋರಿರುತ್ತಾರೆ.

ಆದುದರಿಂದ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಜಾನ್ ಮೈಕಲ್ ಕುನ್ಹಾ ಇವರ ನೇತೃತ್ವದ, ಕೋವಿಡ್-19ರ ವಿಚಾರಣಾ ಆಯೋಗ ಇವರ ಕೋರಿಕೆಯಂತೆ, ಆಯೋಗದ ಅವಧಿಯನ್ನು ದಿನಾಂಕ:25.05.2024 ರಿಂದ 31.08.2024 ರವರೆಗೆ ವಿಸ್ತರಿಸಲಾಗಿದೆ.

BIG NEWS : ಕೋವಿಡ್-19 ಹಗರಣ : ರಾಜ್ಯ ಸರ್ಕಾರದಿಂದ ವಿಚಾರಣಾ ಆಯೋಗದ ಅವಧಿ ವಿಸ್ತರಿಸಿ ಆದೇಶ BIG NEWS: Covid-19 scam: State govt extends tenure of inquiry commission
Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಬಾಬ್ ಮತ್ತು ಶವರ್ಮಾ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುತ್ತಿರುವುದು

ನಾನ್‌ ವೆಜ್‌ ಪ್ರಿಯರಿಗೆ ಬಿಗ್‌ ಶಾಕ್ : ರಾಜ್ಯದಲ್ಲಿ ಶವರ್ಮಾ ಮತ್ತು ಕಬಾಬ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಪತ್ತೆ

3 Mins Read

ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಕಾರು ಅಪಘಾತ

1 Min Read

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

1 Min Read
Recent News
ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಬಾಬ್ ಮತ್ತು ಶವರ್ಮಾ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುತ್ತಿರುವುದು

ನಾನ್‌ ವೆಜ್‌ ಪ್ರಿಯರಿಗೆ ಬಿಗ್‌ ಶಾಕ್ : ರಾಜ್ಯದಲ್ಲಿ ಶವರ್ಮಾ ಮತ್ತು ಕಬಾಬ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಪತ್ತೆ

BIG BREAKING: ಭಾರತದಾದ್ಯಂತ ‘ವೆಬ್ ವಾಟ್ಸ್ ಅಪ್’ ಸೇವೆ ಡೌನ್: ಬಳಕೆದಾರರು ಪರದಾಟ | WhatsApp Down

ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಕಾರು ಅಪಘಾತ

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

State News
ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕಬಾಬ್ ಮತ್ತು ಶವರ್ಮಾ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುತ್ತಿರುವುದು KARNATAKA

ನಾನ್‌ ವೆಜ್‌ ಪ್ರಿಯರಿಗೆ ಬಿಗ್‌ ಶಾಕ್ : ರಾಜ್ಯದಲ್ಲಿ ಶವರ್ಮಾ ಮತ್ತು ಕಬಾಬ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಕೃತಕ ಬಣ್ಣ ಪತ್ತೆ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಬೆಂಗಳೂರು : ಆಹಾರ ಪ್ರಿಯರ ನೆಚ್ಚಿನ ಖಾದ್ಯಗಳಾದ ಶವರ್ಮಾ ಮತ್ತು ಕಬಾಬ್‌ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಹಾಗೂ ಕೃತಕ ಬಣ್ಣಗಳ…

ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಕಾರು ಅಪಘಾತ

BREAKING: ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿ ಭೀಕರ ಅಪಘಾತ; ಪ್ರಾಣಾಪಾಯದಿಂದ ಪಾರು

ನಾಪತ್ತೆಯಾಗಿಲ್ಲ ಕೋಟಿ ಬೆಲೆಯ ಕಲ್ಲುಗಳು, ಗೋದಾಮೂ ಹಾಳಾಗಿಲ್ಲ: ಸಾಗರ ‘APMC ಕಾರ್ಯದರ್ಶಿ’ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.