Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ಎಷ್ಟು ಪರ್ಸೆಂಟ್ ಸರಕಾರ: MLC ಛಲವಾದಿ ನಾರಾಯಣಸ್ವಾಮಿ
KARNATAKA

ಇದು ಎಷ್ಟು ಪರ್ಸೆಂಟ್ ಸರಕಾರ: MLC ಛಲವಾದಿ ನಾರಾಯಣಸ್ವಾಮಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಸರಕಾರ ಕೊಟ್ಟ ಬೆಲೆ ಏನು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ, ವಿಪಕ್ಷದ ನಾಯಕರು ಒಂದು ವಿಚಾರದಲ್ಲಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದ ತಕ್ಷಣ ಎಚ್ಚತ್ತುಕೊಳ್ಳಬೇಕು; ಅದನ್ನು ಪರಿಹರಿಸಬೇಕು. ಆದರೆ, ಈ ಸರಕಾರ ಅತ್ತ ಗಮನ ಕೊಟ್ಟಿಲ್ಲ ಎಂದು ತಿಳಿಸಿದರು.

ಕಾನೂನು- ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟ ಕುರಿತು ತಿಂಗಳುಗಟ್ಟಲೆ ಕಾಲ ಬಿಜೆಪಿ ತಿಳಿಸಿದ್ದರೂ ಈ ಮಾನಗೇಡಿ ಸರಕಾರ ಎಚ್ಚತ್ತುಕೊಂಡಿಲ್ಲ; ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು. ಅತ್ಯಾಚಾರ, ಲವ್ ಜಿಹಾದ್ ವಿಚಾರದಲ್ಲಿ ಸರಕಾರ ಗಮನ ಕೊಡುತ್ತಿಲ್ಲ. ಕೊಲೆಗಳೂ ಹೆಚ್ಚಾಗಿವೆ. ನಿನ್ನೆ ಕಸ್ಟಡಿ ಸಾವು ಸಂಭವಿಸಿದೆ. ಯಾರಾದರೂ ಇವುಗಳ ಕುರಿತು ಪ್ರಶ್ನಿಸಿದರೆ ಎಲ್ರೀ ಹದಗೆಟ್ಟಿದೆ ಎಂದು ಉಡಾಫೆ ಮಾತನಾಡುತ್ತಾರೆ ಎಂದು ದೂರಿದರು.

ಗುಲ್ಬರ್ಗಕ್ಕೆ ಪಿಎಚ್‍ಡಿ ಮಾಡಲೆಂದು ಹೋಗಿದ್ದ ದಲಿತ ಸಾಹಿತಿ ಆನಂದ್ ಸಾವನ್ನಪ್ಪಿದ್ದು ಯಾಕೆ? ಇದರ ಬಗ್ಗೆ ಜಿಲ್ಲಾ ಸಚಿವರು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡಿಲ್ಲ. ಏನಾದರೂ ಕೇಳಿದರೆ ಬೇರೆ ಸರಕಾರ ಇದ್ದಾಗ ಮರ್ಡರ್ ಆಗಿಲ್ವ? ಎಂದು ಕೇಳುತ್ತಾರೆ. ಇದು ಉಡಾಫೆ ಉತ್ತರವಲ್ಲವೇ ಎಂದು ಕೇಳಿದರು.

ನೀವು ಕೇವಲ ಲೂಟಿ ಮಾಡಲೆಂದು ಬಂದಿದ್ದೀರಾ? ಎಂದರಲ್ಲದೆ, ಇಡೀ ದೇಶದಲ್ಲಿ ನಡೆಯುವ ಚುನಾವಣೆಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಅವರು ತಿಳಿಸಿದರು. ಪಂಚರಾಜ್ಯ ಚುನಾವಣೆಗೆ ದುಡ್ಡು ಕೊಟ್ಟಿದ್ದಾಯ್ತು. ಈಗ ಸಂಸತ್ ಚುನಾವಣೆಗೂ ದುಡ್ಡು ಕೊಟ್ಟಿದ್ದಾಯ್ತು. ನಮ್ಮ ಮೇಲೆ 40 ಪರ್ಸೆಂಟ್ ಸರಕಾರ ಎಂದು ಹೇಳಿದ ನೀವು, ಈಗ ನಿಮ್ಮದು ಎಷ್ಟು ಪರ್ಸೆಂಟ್ ಸರಕಾರ ಎಂದು ಉತ್ತರ ಕೊಡಿ ಎಂದು ಆಗ್ರಹಿಸಿದರು.

ಈ ಸರಕಾರ ನಮ್ಮ ರಕ್ತ ಹೀರುತ್ತಿದೆ. ಶೇ 60ರಷ್ಟು ಕಮಿಷನ್ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ಅವರು ಗಮನ ಸೆಳೆದರು. ಈ ಸರಕಾರ ಒಂದು ತುಂಡು ಗುತ್ತಿಗೆಯನ್ನೂ ಕೊಟ್ಟಿಲ್ಲ. ನಮ್ಮ ಸರಕಾರದ ಕಾಮಗಾರಿಗಳಿಗೆ ಶೇ 60 ಕಮಿಷನ್ ಹೊಡೆಯುತ್ತಿದೆ ಎಂದರೆ ಈ ಸರಕಾರದ ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ‘ಸಿಎಂ, ಡಿಸಿಎಂ’: ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಭಕ್ತರು

ರಾಹುಲ್‌ ದ್ರಾವೀಡ್‌ ಬದಲಿಗೆ ʻಟೀಂ ಇಂಡಿಯಾʼದ ನೂತನ ಕೋಚ್ ಆಗಿ ʻಗೌತಮ್‌ ಗಂಭೀರ್ʼ ಆಸಕ್ತಿ : ವರದಿ

Share. Facebook Twitter LinkedIn WhatsApp Email

Related Posts

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

1 Min Read

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

1 Min Read

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

2 Mins Read
Recent News

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

State News
KARNATAKA

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಜೂನ್ 1ಕ್ಕೆ ಮುಂದೂಡಿದ ಹೈಕೋರ್ಟ್

By ಸುರೇಶ್‌ KARNATAKA 1 Min Read

ಧಾರವಾಡ : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷೆ ಅಮಾನತ್ತಿನಲ್ಲಿ ಇಟ್ಟು ಜಾಮೀನು ಕೋರಿ…

ಶ್ರೀ ಧನ್ವಂತರಿ ನಾಮಕ ಪರಮಾತ್ಮನ ಸ್ಮರಣೆ ಮಾಡಿ, ನಿಮ್ಮ ದೈಹಿಕ, ಮಾನಸಿಕ ಸಮಸ್ಯೆ ದೂರ

ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ

BREAKING : ಬೆಂಗಳೂರಿನ ಅಂಚೆ ಕಚೇರಿಗೆ ಪಾರ್ಸೆಲ್ ನಲ್ಲಿ ಬಂತು ಹೈಡ್ರೋಗಾಂಜಾ : 3 ಕೋಟಿ ಮೌಲ್ಯದ ಗಾಂಜಾ ಜಪ್ತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.