ಬೆಂಗಳೂರು : ಬೆಂಗಳೂರಿನ ಕೆಸಿ ಜನರಲ್ ಹಾಸ್ಪಿಟಲ್ ನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಐಸಿಯು(ICU)ನಲ್ಲಿ ಇದ್ದ ವ್ಯಕ್ತಿಗೆ ನಿನ್ನೆ ರಾತ್ರಿ ರಕ್ತ ಬರುವ ಹಾಗೆ ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ನಿನ್ನೆ ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರು ವಿಷ ಸೇವಿಸಿ ಐಸಿಯು ವಾರ್ಡ್ ಸೇರಿದ್ದರು. ಈ ವೇಳೆ ಆಸ್ಪತ್ರೆಯ ವಾರ್ಡ್ ಬಾಯ್ ಧನಂಜಯ್ ಎಂಬಾತ ಇಗ್ಗಾ ಮುಗ್ಗ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಚಿಕಿತ್ಸೆ ವೇಳೆ ಕೂಗಾಡಿದ ಎನ್ನುವ ಕಾರಣಕ್ಕೆ ಥಳಿತ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಗಾಯಾಳು ವೆಂಕಟೇಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಗಿ ಸಂಬಂಧಿ ಲಲಿತ ಎಂಬುವವರು ಮಾತನಾಡಿ, ನಮ್ಮವರು ವಿಷ ಕುಡಿದು ಕೆಸಿ ಜನರಲ್ ಆಸ್ಪತ್ರೆ ಐಸಿಯುನಲ್ಲಿ ಸೇರಿದ್ದರು. ಈ ವೇಳೆ ‘ಧನಂಜಯ ಎಂಬ ವಾರ್ಡ್ ಬಾಯ್ ಪೇಷಂಟ್ ಕೂಗಾಡುತ್ತಿದ್ದ ಎಂದು ಹೇಳಿ ಬಾಯಿ, ಮೂಗಿನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಹೇಳಿದ್ದಿಷ್ಟು
ಇನ್ನು ಘಟನೆ ಕುರಿತು ಕೆ.ಸಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಇಂದಿರಾ ಕಬಾಡೆ ಅವರು ಸ್ಪಷ್ಟನೆ ನೀಡಿದ್ದು, ‘ವಿಷ ಕುಡಿದ ಹಿನ್ನೆಲೆ ಮೇ. 22 ರಂದು ಬಂದು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಆನೇಕಲ್ ಆಸ್ಪತ್ರೆಯೊಂದರಲ್ಲಿ ಮೊದಲು ಚಿಕಿತ್ಸೆ ಪಡೆದು ಬಳಿಕ ಇಲ್ಲಿಗೆ ಬಂದಿದ್ದರು.
ನಮ್ಮ ವೈದ್ಯರು ಸಹ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಒಂದು ಸೂಕ್ಷ್ಮ ಚಿಕಿತ್ಸೆ ಕೊಡುವಾಗ ರೋಗಿಗಳು ಒಮ್ಮೊಮ್ಮೆ ವ್ಯತಿರಿಕ್ತವಾಗಿ ವರ್ತಿಸುತ್ತಾರೆ. ಅದರಲ್ಲೂ ಅವರು ತೀವ್ರ ನಿಗಾ ಘಟಕದಲ್ಲಿ ಇರೋದರಿಂದ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ ಎಂದು ತಿಳಿಸಿದ್ದಾರೆ.