ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ ಟ್ರಿಪ್ ಗಳನ್ನು ಓಡಿಸಲು ಪೂರ್ವ ಮಧ್ಯ ರೈಲ್ವೆಯು ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ:
ರೈಲು ಸಂಖ್ಯೆ 05271/05272 ಮುಜಾಫರ್ಪುರ-ಯಶವಂತಪುರ-ಮುಜಾಫರ್ಪುರ ಬೇಸಿಗೆ ವಿಶೇಷ ರೈಲು
- ರೈಲು ಸಂಖ್ಯೆ 05271 ಮೇ 24 ಮತ್ತು 31, 2024 ರಂದು 15:30 ಗಂಟೆಗೆ ಮುಜಾಫರ್ಪುರದಿಂದ ಹೊರಟು ಭಾನುವಾರ 19:00 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.
- ರೈಲು ಸಂಖ್ಯೆ 05272 ಯಶವಂತಪುರದಿಂದ ಮೇ 27 ಮತ್ತು ಜೂನ್ 3, 2024 ರಂದು 07:30 ಗಂಟೆಗೆ ಹೊರಟು ಬುಧವಾರ 12:00 ಗಂಟೆಗೆ ಮುಜಾಫರ್ಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಎರಡು ಮಾರ್ಗಗಳಲ್ಲಿ ಹಾಜಿಪುರ , ಪಾಟಲಿಪುತ್ರ, ಅರಾ, ಬಕ್ಸಾರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್ರಾಜ್ ಚಿಯೋಕಿ, ಮಾಣಿಕ್ಪುರ, ಸತ್ನಾ, ಕಟ್ನಿ, ಜಬಲ್ಪುರ್, ನರಸಿಂಗಪುರ, ಪಿಪರಿಯಾ, ಇಟಾರ್ಸಿ, ನಾಗ್ಪುರ, ಬಲ್ಹಾರ್ಷಾ, ಸಿರ್ಪುರ್ ಕಾಖಜನಗರ್, ರಾಮಗುಂಡಂ, ಕಾಜಿಪೇಟ್, ಜಂಗಾಂವ್, ಕಾಚಿಗುಡ, ಶಾದ್ನಗರ್, ಜಡ್ ಚರ್ಲಾ, ಮಹಬೂಬ್ ನಗರ್, ಗದ್ವಾಲ್, ಕರ್ನೂಲ್ ಸಿಟಿ, ಡೋನ್, ಗುತ್ತಿ, ಅನಂತಪುರ & ಧರ್ಮಾವರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಸರ್ ಎಮ್ ವಿಶ್ವೇಶ್ವರಯ್ಯ ಟರ್ಮಿನಲ್-ಭುವನೇಶ್ವರ ಮತ್ತು ಎಸ್ಎಂವಿಟಿ ಬೆಂಗಳೂರು-ಸಂಬಲ್ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆಯು ಓಡಿಸಲಿದೆ. ಅದರ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06271/06272 ಎಸ್ಎಂವಿಟಿ ಬೆಂಗಳೂರು-ಭುವನೇಶ್ವರ ಸಮ್ಮರ್ ಸ್ಪೆಷಲ್ ಎಕ್ಸ್ ಪ್ರೆಸ್:
- ರೈಲು ಸಂಖ್ಯೆ 06271 ಮೇ 31, 2024 ರಂದು 00:10 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 04:00 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.
- ರೈಲು ಸಂಖ್ಯೆ 06272 ಜೂನ್ 2, 2024 ರಂದು 06:30 ಗಂಟೆಗೆ ಭುವನೇಶ್ವರದಿಂದ ಹೊರಟು ಮರುದಿನ 09:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ ಮತ್ತು ಖುರ್ದಾ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ರೈಲು ಸಂಖ್ಯೆ 06279/06280 ಎಸ್ಎಂವಿಟಿ ಬೆಂಗಳೂರು-ಸಂಬಲ್ಪುರ-ಎಸ್ಎಂವಿಟಿ ಬೆಂಗಳೂರು ಸಮ್ಮರ್ ಸ್ಪೆಷಲ್ ಎಕ್ಸ್ ಪ್ರೆಸ್:
- ರೈಲು ಸಂಖ್ಯೆ 06279 ಜೂನ್ 7, 2024 ರಂದು 00:10 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 05:00 ಗಂಟೆಗೆ ಸಂಬಲ್ಪುರವನ್ನು ತಲುಪಲಿದೆ.
- ರೈಲು ಸಂಖ್ಯೆ 06280 ಜೂನ್ 8, 2024 ರಂದು 11:35 ಗಂಟೆಗೆ ಸಂಬಲ್ಪುರದಿಂದ ಹೊರಟು ಮರುದಿನ 19:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ , ರಾಜಮಂಡ್ರಿ, ದುವ್ವಾಡಾ, ಕೊತ್ತವಲಸ, ವಿಜಯನಗರಂ, ಬೊಬ್ಬಿಲಿ, ಪಾರ್ವತಿಪುರಂ, ರಾಯಗಡ, ಮುನಿಗುಡ, ಕೇಸಿಂಗಾ, ಟಿಟ್ಲಾಘರ್, ಬಾಲಂಗಿರ್ ಮತ್ತು ಬಾರ್ಘರ್ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಬುಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
BIG NEWS: 11 ವರ್ಷಗಳ ಹಿಂದಿನ ‘ರೇಪ್ ಅಂಡ್ ಮರ್ಡರ್’ ಪ್ರಕರಣ ಬೇಧಿಸಿದ ‘CID’: ಮೂವರ ಬಂಧನ
BREAKING: ‘BBMP ಮುಖ್ಯ ಆಯುಕ್ತ’ರ ಹೆಸರಲ್ಲಿ ‘ಮೆಸೇಜ್’: ‘FIR’ ದಾಖಲು