ಬೆಳಗಾವಿ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಹನುಮ ಮಂದಿರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ನೂರು ಕೋಟಿ ನೀಡಿದ್ದಾರೆ. ಆದರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಸಿಎಂ ವಿರುದ್ಧ ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನಟ ಚೇತನ್, ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ನೂರು ಕೋಟಿ ಹಣ ನೀಡಿರುವ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಆ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಸುವಂತೆ ಒತ್ತಾಯಿಸಿದರು.
ತಾನು ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನಿಜವಾಗಲೂ ಅಹಿಂದಪರ ಕೆಲಸ ಮಾಡುತ್ತಿಲ್ಲ.ಅಹಿಂದ ಪರ ಕೆಲಸ ಮಾಡದೇ ಸೋಮಾರಿಯಾಗಿದ್ದಾರೆ.ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿ ಶ್ರೀಮಂತರ ಆಸ್ತಿಯನ್ನ ಬಡವರಿಗೆ ಮರುಹಂಚಿಕೆ ಮಾಡುವಂತೆ ಒತ್ತಾಯಿಸಿದರು.
ಸೋಮಾರಿ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಮುಂದಾಗದೇ ಹನುಮಾನ ಜನ್ಮಭೂಮಿ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಇದೇ ಸರ್ಕಾರದ ಆದ್ಯತೆನಾ? ಎಂದು ಪ್ರಶ್ನಿಸಿದರು.