ಶಿವಮೊಗ್ಗ: ಆಗಸ್ಟ್ 2024 ನೇ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಶಿಕಾರಿಪುರದಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್,ಸಿ ಉತ್ತೀರ್ಣರಾದವರಿಗೆ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಟರ್ನರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸ್ ಸಿ.ಎನ್.ಸಿ ಮೆಷಿನಿಂಗ್, ಬೇಸಿಕ್ ಡಿಸೈನರ್& ವರ್ಚುವಲ್ ವೇರಿಫೈಯರ್ ಮೆಕ್ಯಾನಿಕ್,ಆರ್ಟಿಸಸ್ ಯೂಸಿಂಗ್ ಅಡ್ವಾನ್ಸ್ ಟೂಲ್, ಮ್ಯಾನುಫಾಕ್ಟರಿಂಗ್ ಪ್ರೋಸಸ್ ಕಂಟ್ರೋಲ್ & ಆಟೋಮೆಷನ್ ಹಾಗೂ ಪಿಪಿಪಿ ಮ್ಯಾನೇಜ್ಮೆಂಟ್ ಸೀಟ್ನಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರಿಗೆ ಎಲೆಕ್ಟ್ರೀಷಿಯನ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಮತ್ತು 8ನೇ ತರಗತಿ ಪಾಸ್ / ಎಸ್.ಎಸ್.ಎಲ್,ಸಿ ಪಾಸ್/ಫೇಲ್ ಆದವರಿಗೆ ವೆಲ್ಡರ್ ಹುದ್ದೆಗಳಿಗೆ ತರಬೇತಿ ನೀಡಲಾಗುವುದು.
ಆಸಕ್ತ ಆಭ್ಯರ್ಥಿಗಳು www.cite.karnataka.gov.in ಆನ್ಲೈನ್ನಲ್ಲಿ ಜೂ. 03 ರೊಳಗಾಗಿ ಸಲ್ಲಿಸುವುದು ಹಾಗೂ ಆಯ್ಕೆ ಮಾಡಿಕೊಂಡ ಸರ್ಕಾರಿ ಐಟಿಐ ಗಳಲ್ಲಿ ಮೂಲ ದಾಖಲಾತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ತೆರಳಿ ನಿಗದಿತ ದಿನಾಂಕದೂಳಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳುವುದು ಹಾಗೂ ಪಿಪಿಪಿ ಸೀಟುಗಳ ಪ್ರವೇಶಕ್ಕಾಗಿ ಖುದ್ದಾಗಿ/ಕಚೇರಿ ದೂ.ಸಂ. ಮೂಲಕ ಸಂಪರ್ಕಿಸುವಂತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08187-295040ಗಳನ್ನು ಸಂಪರ್ಕಿಸುವುದು.