ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧ ಮತ್ತು ವಿಕಾಸ ಸೌಧದ ಮಧ್ಯಭಾಗದ ತೆರೆದ ಪ್ರದೇಶದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಧ್ಯಾನಾಸಕ್ಮ ಕಂಚಿನ ಪ್ರತಿಮೆಗೆ ಪಕ್ಷಿಗಳ ಮಲ-ಮೂತ್ರಗಳಿಂದ ಉಂಟಾಗುವ ತ್ಯಾಜ್ಯ ಹಾಗೂ ಮಾಲಿನ್ಯದಿಂದ ಪ್ರತಿಮೆಗೆ ಉಂಟಾಗುತ್ತಿದ್ದನ್ನು ಬಹಳ ನೋವಿನಿಂದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ಗಮನ ಸೆಳೆದು ಗಾಂಧಿಜೀ ಪುತ್ಥಳಿಯನ್ನು ತ್ಯಾಜ್ಯ ಮುಕ್ತವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶದ ಪ್ರತಿಷ್ಠಿತ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಸೌಧದ ವೀಕ್ಷಣೆಗೆ ನಿತ್ಯವೂ ದೇಶ ವಿದೇಶಗಳಿಂದ, ರಾಜ್ಯ, ಅಂತಾರಾಜ್ಯಗಳಿಂದ ಗಣ್ಯರು, ಪ್ರವಾಸಿಗರು, ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲರೂ ಕಡ್ಡಾಯವಾಗಿ ಮಹಾತ್ಮ ಗಾಂಧೀಜಿಯವರ ಪ್ರತಿಮೆ ವೀಕ್ಷಿಸಿ ಅಲ್ಲಿ ಛಾಯಾ ಚಿತ್ರಗಳನ್ನು ತೆಗೆದುಕೊಳ್ಳುವ ದೃಶ್ಯವು ನಿತ್ಯ ಸದೃಶ್ಯವಾದುದ್ದು. ಆದರೆ ಸದರಿ ಪ್ರತಿಮೆಯು ತೆರೆದ ಪ್ರದೇಶದಲ್ಲಿರುವುದರಿಂದ ವಾತಾವರಣ ಹಾಗೂ ಪಕ್ಷಿಗಳ ಮಲ-ಮೂತ್ರಗಳಿಂದ ಉಂಟಾಗುವ ತ್ಯಾಜ್ಯ ಹಾಗೂ ಮಾಲಿನ್ಯದಿಂದ ಪ್ರತಿಮೆಯ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿತ್ತು. ಇದನ್ನು ಗಮನಿಸಿ ಮಹಾತ್ಮ ಗಾಂಧಿಜೀಯವರ ಪುತ್ಥಳಿಗೆ ತೋರಲಾಗುತ್ತಿರುವ ಅಗೌರವದ ಬಗ್ಗೆ ವ್ಯಥೆಪಟ್ಟು ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳಿಗೆ ಎರಡು ಬಾರಿ ಪತ್ರ ಬರೆದು ಪ್ರತಿಮೆಯನ್ನು ಶುಭ್ರವಾಗಿರಿಸಿ ಸೂಕ್ತ ಗೌರವ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಈ ಬಗ್ಗೆ ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋಧ್ಯಮ ಸಚಿವರಾದ ಹೆಚ್.ಕೆ ಪಾಟೀಲರು ಸಹ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಭಾಪತಿ ಬಸವರಾಜ ಹೊರಟ್ಟಿಯವರ ಒತ್ತಾಯಪೂರ್ವಕ ಆಗ್ರಹ ಹಾಗೂ ಮಾನ್ಯ ಸಚಿವರಾದ ಹೆಚ್.ಕೆ ಪಾಟೀಲರ ಸೂಚನೆಯಂತೆ ಅಧಿಕಾರಿಗಳು ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಪುತ್ಥಳಿಗೆ ರಾಸಾಯನಿಕಯುಕ್ತ ಪದಾರ್ಥ ಹೊಂದಿದ ಸಾಧನವನ್ನು ಬಳಸಿ ಪಕ್ಷಿಗಳು ಪುತ್ಥಳಿ ಮೇಲೆ ಕುಳಿತುಕೊಳ್ಳದಂತೆ ಕ್ರಮ ಕೈಗೊಂಡಿದ್ದು ಇಂದು ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಂಸದೀಯ ವ್ಯವಹಾರ ಮತ್ತು ಪ್ರವಾಸೋಧ್ಯಮ ಸಚಿವರಾದ ಹೆಚ್.ಕೆ ಪಾಟೀಲರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುತ್ಥಳಿಯ ಮೇಲೆ ಪಕ್ಷಿಗಳ ಮಲ-ಮೂತ್ರ ಬೀಳದಂತೆ ಹಾಗೂ ಪ್ರತಿಮೆಯ ಸೌಂದರ್ಯಕ್ಕೆ ಧಕ್ಕೆ ಉಂಟಾಗದಂತೆ ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ನೈಜ ಸೌಂದರ್ಯ, ಬಾಹ್ಯ ಆಕರ್ಷಣೆ ಕುಂದದಂತೆ ನಿರಂತರವಾಗಿ ಸೂಕ್ತ ಸಂರಕ್ಷಣಾ ಕ್ರಮ ಕೈಗೊಳ್ಳುವ ಕುರಿತು ಸೂಕ್ತ ಸಾಧನ ಬಳಸಿ ರಾಷ್ಟ್ರಪಿತ ಗಾಂಧೀಜಿಯವರ ಪ್ರತಿಮೆಗೆ ಸೂಕ್ತ ಗೌರವ ಸಲ್ಲಿಸಿ ಶುಭ್ರವಾಗಿಡುವಂತೆ ವಿಧಾನ ಪರಿಷತ್ ಸಭಾಪತಿಬಸವರಾಜ ಹೊರಟ್ಟಿ ಅಧಿಕಾರಿಗಳಿಗೆ ಆದೇಶಿಸಿದರು.
ಮಹಾತ್ಮ ಗಾಂಧಿಜೀಯವರ ಪ್ರತಿಮೆಯ ಸಂರಕ್ಷಣೆ ಕುರಿತಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಂದ ವ್ಯಕ್ತವಾದ ಕಾಳಜಿ ಮತ್ತು ಕಳಕಳಿ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಮಹೇಶ ವಾಳ್ವೇಕರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು
‘ಸೇನೆಗೆ ಅಗ್ನಿವೀರ ಬೇಡ, ನಾವದನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ’ : ರಾಹುಲ್ ಗಾಂಧಿ