ಬೆಂಗಳೂರು : ಕಾಂಗ್ರೆಸ್ ಸರ್ಕಾರ ಆಡಳಿತ ವಹಿಸಿಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕುರಿತಂತೆ ಬಿಜೆಪಿಯ ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಸಾವಿರಾರು ಹತ್ಯೆ ಆತ್ಮಹತ್ಯೆಗಳೇ ನಿಮ್ಮ ಸಾಧನೆಯ? ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ ಸಿ ಬಿ ಆರ್ ವರದಿ ಪ್ರಕಾರ ನಾಲ್ಕು ತಿಂಗಳಲ್ಲಿ 430 ಕೊಲೆಗಳಾಗಿವೆ. 700 ಹೆಚ್ಚು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹತ್ಯೆ ಆತ್ಮಹತ್ಯೆಯಲ್ಲಿ ಪ್ರತಿ ತಿಂಗಳು ಶತಕದ ದುಡಿದಾಟಿದೆ. ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ಸಮಿತಿಯನ್ನು ರಚಿಸಿದ್ರಿ.ಕೋವಿಡ್ ಅಕ್ರಮಗಳ ತನಿಖಾ ವರದಿ ಬಂತ? ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಬಂತಾ? ಬಿಟ್ ಕಾಯಿನ್ ಹಗರಣದ ತನಿಖಾ ವರದಿ ಬಂದಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಈಗ ಕೆಲವು ಆರೋಪಗಳ ಕುರಿತು ಸಮಿತಿ ರಚಿಸಿದ್ದೀರಿ ಒಂದು ವರ್ಷವಾದರೂ ಯಾವುದೇ ವರದಿಗಳು ಬಂದಿಲ್ಲ. ನಿಮ್ಮದೊಂದು ಸರ್ಕಾರ ನೂರಾರು ಗೊಂದಲ. ಸರ್ಕಾರ ಯಾವ ಹೊಸ ಯೋಜನೆಯನ್ನೂ ಈ ಒಂದು ವರ್ಷದಲ್ಲಿ ತಂದಿಲ್ಲ. ನೀವ್ಯಾರೂ ಅನುಭವಿಗಳಲ್ಲ. ಒಂದು ವರ್ಷದಲ್ಲಿ ಯಾವ ದೂರದೃಷ್ಟಿಯ ಬುನಾದಿ ಹಾಕಿದ್ದೀರಿ ಹೇಳಿ? ಎಂದು ಪ್ರಶ್ನಿಸಿದರು.
ಸರ್ಕಾರದ ಖಜಾನೆ ಹಂಚಿದ್ದು ಸರ್ಕಾರದ ಸಾಧನೆ ಆಗಲ್ಲ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂವೇದನೆ ರಹಿತವಾಗಿ ಸರ್ಕಾರ ನಡೆದುಕೊಂಡಿತ್ತು. ಬಾಂಬ್ ಬ್ಲಾಸ್ಟ್ ಬಗ್ಗೆ ತೇಲಿಸಿ ಮಾತಾಡಿದರು. ಮತಾಂಧತೆ ಬೆಂಬಲಿಸಿ ಮತಬ್ಯಾಂಕ್ ಗಟ್ಟಿ ಮಾಡಿಕೊಂಡಿದ್ದು ಇವರ ಸಾಧನೆ.ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ ಟಿ ರವಿ ಆಕ್ರೋಶ ಅವರ ಹಾಕಿದ್ದಾರೆ.