ಮೈಸೂರು : ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಮುಖ್ಯಮಂತ್ರಿ ಇದ್ದರೆ ಅದು ಎಚ್ ಡಿ ಕುಮಾರಸ್ವಾಮಿ ಎಂದು ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾಜಿ ಸಚಿವ HD ರೇವಣ್ಣ ಹೇಳಿಕೆ ನೀಡಿದರು.
ಇಂದು ಮೈಸೂರಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸಭೆ ನಡೆಯುತ್ತಿದ್ದು ಈ ಒಂದು ಸಭೆಯಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಬಿಟ್ಟರೆ ಅಶ್ವಥ್ ನಾರಾಯಣ್, ಜಿಟಿ ದೇವೇಗೌಡ ಕೆಲಸ ಮಾಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಮೊದಲು ಹಲವಡೆ ಕಾಲೇಜುಗಳೆ ಇರಲಿಲ್ಲ. ಹಲವು ತಾಲೂಕುಗಳಲ್ಲಿ ಪಿಯು ಹಾಗೂ ಡಿಗ್ರಿ ಕಾಲೇಜುಗಳು ಇರಲಿಲ್ಲ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 1,600 ಕಾಲೇಜುಗಳನ್ನು ತೆರೆದರು. ಡಿಗ್ರಿ ಪಿಯುಸಿ ಹೈಸ್ಕೂಲ್ ಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದರು. 2006- 2008ರಲ್ಲಿ 4,600 ಅಧ್ಯಾಪಕರನ್ನು ನೇಮಕ ಮಾಡಿದರು.ಜೆಡಿಎಸ್ ಬಿಜೆಪಿ ಅಧಿಕಾರದಲ್ಲಿದ್ದಾಗ ಶಿಕ್ಷಣದಲ್ಲಿ ಬದಲಾವಣೆ ಆಗಿತ್ತು. ನಮ್ಮ ಬಳಿಯೇ ಕೆಲವರು ತಿಂದು ತೇಗಿ ನಮಗೆ ಅನ್ಯಾಯ ಮಾಡಿದ್ದಾರೆ.
ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾರ ಬಗ್ಗೆಯೂ ಈಗ ಮಾತಾಡಲ್ಲ. ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ವಿವೇಕಾನಂದರಿಗೆ ಕೊಡಬೇಕಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮುಕ್ತ ಮಾಡಲು ಈಗ ಒಳ್ಳೆಯ ಸಮಯ. ಎಂದು ಮೈಸೂರಿನಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸಭೆಯಲ್ಲಿ ಎಚ್ ಡಿ ರೇವಣ್ಣ ತಿಳಿಸಿದರು.