ಬೆಂಗಳೂರು:ಬೆಂಗಳೂರಿನಲ್ಲಿ ರಾಜೀವ್‌ಗಾಂಧಿ ಅವರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಅಂತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದ ಡಿಸಿಎಂ ಡಿಕೆಶಿ ಈ ಬಗ್ಗೆ ಟ್ವಟಿರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದೆ. ರಾಜೀವ್‌ಗಾಂಧಿ ಅವರ ದೂರದೃಷ್ಟಿಯಿಂದಲೇ ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿ ಹಾಗೂ ಸ್ವಾವಲಂಬನೆಯ ಉದಯವಾಯಿತು. ಅವರ ದೂರದೃಷ್ಟಿ, ಮುಂದಾಲೋಚನೆ ಹಾಗೂ ದೇಶದ ಭವಿಷ್ಯದ ಬಗ್ಗೆ ಇದ್ದ ಅಪಾರವಾದ ನಂಬಿಕೆಯು ನನ್ನನ್ನೂ ಸೇರಿದಂತೆ ಅನೇಕರನ್ನು ಪ್ರೇರೇಪಿಸಿತು. ಅದೇ ಕಾರಣಕ್ಕೆ ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನಲ್ಲಿ ರಾಜೀವ್‌ಗಾಂಧಿ ಅವರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಅವರ ಆಲೋಚನೆಗಳು ಹಾಗೂ ದೂರದೃಷ್ಟಿಯು ಇಂದಿಗೂ ಕೂಡ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ ಅಂತ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ. ಶ್ರೀ ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದೆ. ರಾಜೀವ್‌ಗಾಂಧಿ ಅವರ ದೂರದೃಷ್ಟಿಯಿಂದಲೇ ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿ ಹಾಗೂ ಸ್ವಾವಲಂಬನೆಯ ಉದಯವಾಯಿತು. ಅವರ ದೂರದೃಷ್ಟಿ, ಮುಂದಾಲೋಚನೆ ಹಾಗೂ ದೇಶದ… pic.twitter.com/P4wyAoMuZF
— DK Shivakumar (@DKShivakumar) May 21, 2024