ಹುಬ್ಬಳ್ಳಿ: ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಇದೇ ಕಾರಣಕ್ಕಾಗಿ ಅಂಜಲಿ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಹುಬ್ಬಳ್ಳಿಯ ಮೃತ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸಾಂತ್ವಾನ ಹೇಳಿದರು. ಈ ಬಳಿಕ ಮಾತನಾಡಿದಂತ ಅವರು ಅಂಜಲಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಿಲ್ಲ. ಕೆಲವು ಬಾರಿ ನಾವು ಹೊರಗಿನವರಿಂದ ತನಿಖೆಗೆ ಆಗಬೇಕು. ಹೀಗಾಗಿ ನೇಹಾ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದರು.
ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸುತ್ತಿದ್ದೇವೆ. ಇಂದು ಸಂಜೆ ಅಥವಾ ನಾಳೆ ಸಿಐಡಿಗೆ ವಹಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಜಾತಿ ಇಲ್ಲ. ಜಾತಿ ಮನೆಯಲ್ಲೇ ಇಟ್ಕೊಳ್ಳಿ ಎಂದರು.
ಹುಬ್ಬಳ್ಳಿಯಲ್ಲಿ ಎರಡು ಕೊಲೆಗಳು ನಡೆದಿರೋದು ದುರದೃಷ್ಟಕರವಾಗಿದೆ. ಆರೋಪಿ ಗಿರೀಶ್ ಪೊಲೀಸರ ವಶದಲ್ಲಿದ್ದಾನೆ. ತನಿಖೆ ನಡೆಯುತ್ತಿದೆ. ಆರೋಪಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕ್ಷ್ಯ ಸಂಗ್ರಹಿಸುತ್ತಿದೆ ಎಂದರು.
BREAKING: ಅಂಜಲಿ ಹತ್ಯೆ ಕೇಸ್: ಇಂದು ಸಂಜೆ ಅಥವಾ ನಾಳೆ ‘CID’ಗೆ ಹಸ್ತಾಂತರ- ಡಾ.ಜಿ ಪರಮೇಶ್ವರ್
BREAKING : ದೊಡ್ಡ ಭಯೋತ್ಪಾದಕ ದಾಳಿ ಸಂಚು ವಿಫಲ : ಗುಜರಾತ್’ನಲ್ಲಿ ನಾಲ್ವರು ‘ISIS ಉಗ್ರರ’ ಬಂಧನ