ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಮಳೆ ಆರ್ಭಟಿಸಿದೆ. ಧಾರಾಕಾರ ಮಳೆಯಿಂದಾಗಿ ರಸ್ತೆಗೆ ನೀರು ನುಗ್ಗಿದ ಪರಿಣಾಮ, ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರಿನ ವಿಧಾನಸೌಧ, ಮಲ್ಲೇಶ್ವರಂ, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಮತ್ತಿಕೆರೆ, ಯಶವಂತಪುರ, ಗೋರಗುಂಟೆ ಪಾಳ್ಯ ಸೇರಿದಂತೆ ವಿವಿಧೆಡೆ ಮಳೆ ಆರ್ಭಟಿಸಿದೆ.
ಮುಂಗಾರು ಪೂರ್ವ ಮಳೆಯ ಆರ್ಭಟದಿಂದಾಗಿ ಚರಂಡಿ ಬಿಟ್ಟು ರಸ್ತೆಗೆ ನೀರು ನುಗ್ಗಿದ ಪರಿಣಾಮ, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಮಳೆಯ ನೀರು ರಸ್ತೆಗೆ ನುಗ್ಗಿದ ಪರಿಣಾಮ ವಾಹನ ಸವಾರರು ರಸ್ತೆ ಯಾವುದು, ಗುಂಡಿ ಯಾವುದು ಅಂತ ಕಾಣದೇ ಪರದಾಡುವಂತಾಗಿದೆ.
ಇಂದು ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಬೆಂಗಳೂರಲ್ಲಿ ಇತ್ತು. ಸಂಜೆಯಾಗುತ್ತಿದ್ದಂತೇ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಸಿಲಿಕಾನ್ ಸಿಟಿ ಜನರು ತತ್ತರಿಸಿ ಹೋಗುವಂತೆ ಆಗಿದೆ.
ಬಿಜೆಪಿ ಶಾಸಕರು ಸಮಾಜ ಘಾತುಕರ ಪರ ನಿಂತು ರಾಜಕಾರಣ: ಸಚಿವ ದಿನೇಶ್ ಗುಂಡೂರಾವ್ ಕಿಡಿ
Watch Video: ‘ಪೊಲೀಸ್ ಠಾಣೆ’ ಏನು ನಿಮ್ಮಪ್ಪಂದಾ.?: ‘PSI’ಗೆ ‘BJP ಶಾಸಕ ಹರೀಶ್ ಪೂಂಜಾ’ ಧಮ್ಕಿ